Sunday, July 7, 2024
Homeಕ್ರೈಂBlack magic: ಮಾಲ್ಡೀವ್ಸ್‌ ಅಧ್ಯಕ್ಷರ ಮೇಲೆ ವಾಮಾಚಾರ ಪ್ರಯೋಗ - ಇಬ್ಬರು ಸಚಿವರು ಅರೆಸ್ಟ್‌!

Black magic: ಮಾಲ್ಡೀವ್ಸ್‌ ಅಧ್ಯಕ್ಷರ ಮೇಲೆ ವಾಮಾಚಾರ ಪ್ರಯೋಗ – ಇಬ್ಬರು ಸಚಿವರು ಅರೆಸ್ಟ್‌!

ಮಾಲ್ಡೀವ್ಸ್‌ : ಅಧ್ಯಕ್ಷರ ಮೇಲೆ ‘ಮಾಟಮಂತ್ರ’ ಮಾಡಿದ ಆರೋಪದ ಹಿನ್ನಲೆ ಮಾಲ್ಡೀವ್ಸ್ ನ ಸಚಿವರಿಬ್ಬರು ಹಾಗೂ ಅವರ ಸಹಚರರನ್ನು ಬಂಧಿಸಲಾಗಿದೆ.

ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಮೇಲೆ ಮಾಟಮಂತ್ರ ಮಾಡಿದ್ದಾರೆ ಎಂದು ಮಾಲ್ಡೀವ್ಸ್ ಪೊಲೀಸರು ಬಂಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪರಿಸರ ಸಚಿವಾಲಯದ ರಾಜ್ಯ ಸಚಿವೆ ಶಮ್ನಾಜ್ ಸಲೀಂ, ಅವರ ಮಾಜಿ ಪತಿ ಆದಂ ರಮೀಜ್, ರಾಷ್ಟ್ರಪತಿ ಕಚೇರಿಯ ಸಚಿವ ಮತ್ತು ಇತರ ಇಬ್ಬರನ್ನು ಬಂಧಿಸಲಾಗಿದೆ.
ಭಾನುವಾರ ಬಂಧಿಸಲಾಗಿದ್ದು, ಒಟ್ಟು ಏಳು ದಿನಗಳ ಕಸ್ಟಡಿಗೆ ನೀಡಲಾಗಿದೆ ಎಂದು ಸ್ಥಳಿಯ ಮಾಧ್ಯಮಗಳು ತಿಳಿಸಿವೆ.

ಹೆಚ್ಚಿನ ಸುದ್ದಿ