Sunday, July 7, 2024
Homeಕ್ರೀಡೆParis Olympics : ಪ್ಯಾರಿಸ್ ಒಲಂಪಿಕ್ ಶೂಟಿಂಗ್ ಸ್ಪರ್ಧೆಗೆ ಬಿಜೆಪಿ ಶಾಸಕಿ ಆಯ್ಕೆ

Paris Olympics : ಪ್ಯಾರಿಸ್ ಒಲಂಪಿಕ್ ಶೂಟಿಂಗ್ ಸ್ಪರ್ಧೆಗೆ ಬಿಜೆಪಿ ಶಾಸಕಿ ಆಯ್ಕೆ

ಕಾಮನ್ ವೆಲ್ತ್ ಗೇಮ್ಸ್‌ ಮತ್ತು ಏಷ್ಯಾಡ್‌ನ‌ಲ್ಲಿ ಪದಕ ಜಯಿಸಿರುವ ಶೂಟರ್​ ಶ್ರೇಯಸಿ ಸಿಂಗ್ ಜುಲೈ 26 ರಿಂದ ಪ್ಯಾರಿಸ್‌ನಲ್ಲಿ ಶುರುವಾಗಲಿರುವ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ

ಬಿಹಾರದ ಜಮುಯಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕಿ  ಶ್ರೇಯಸಿ ಸಿಂಗ್‌ ಅವರು ಈ ಹಿಂದೆ ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯನ್ ಗೇಮ್ಸ್​ ಶೂಟಿಂಗ್​ನಲ್ಲಿ ಪದಕ ಗೆದ್ದಿದ್ದು, ಇದೇ ಮೊದಲ ಬಾರಿಗೆ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದಾರೆ

ಈ ಹಿಂದೆ ಒಲಿಂಪಿಕ್ಸ್​ಗೆ ಆಯ್ಕೆಯ ಮೊದಲ ಪಟ್ಟಿಯಲ್ಲಿ ಶ್ರೇಯಸಿ ಹೆಸರಿರಲಿಲ್ಲ. ಆದರೆ ಟೋಕಿಯೊ ಒಲಿಂಪಿಯನ್‌ ಮನು ಭಾಕರ್‌ ಮಹಿಳೆಯರ 10 ಮೀ. ಪಿಸ್ತೂಲ್‌ ಮತ್ತು 25 ಮೀ. ಪಿಸ್ತೂಲ್‌ ಸ್ಪರ್ಧೆಗಳಲ್ಲಿ ಅರ್ಹತೆ ಪಡೆದಿದ್ದರು. 

ಹೀಗಾಗಿ ಒಂದು ಕೋಟಾವನ್ನು ಮರುಹಂಚಿಕೆ ಮಾಡಬಹುದಾಗಿತ್ತು. ಇದನ್ನು ಟ್ರ್ಯಾಪ್‌ ಶೂಟರ್‌ಗಾಗಿ ಬದಲಾಯಿಸಲಾಗಿದ್ದು, ಈ ಕೋಟಾದಲ್ಲಿ ಶ್ರೇಯಸಿ ಅವರನ್ನು ಆಯ್ಕೆ ಮಾಡಲಾಯಿತು.

ಹೆಚ್ಚಿನ ಸುದ್ದಿ