Sunday, July 7, 2024
Homeಕ್ರೈಂNew Criminal Laws: ಬಿಎಸ್‌ಎಸ್‌ ಅಡಿ ಬೆಂಗಳೂರಿನಲ್ಲಿ39 ಹೊಸ ಪ್ರಕರಣ ದಾಖಲು

New Criminal Laws: ಬಿಎಸ್‌ಎಸ್‌ ಅಡಿ ಬೆಂಗಳೂರಿನಲ್ಲಿ39 ಹೊಸ ಪ್ರಕರಣ ದಾಖಲು

ಬೆಂಗಳೂರು: ಜುಲೈ 1 ರಿಂದ ದೇಶಾದ್ಯಂತ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ ಬಂದಿದ್ದು ಬೆಂಗಳೂರಿನಲ್ಲಿ ಮೊದಲ ದಿನವೇ ಒಟ್ಟು 39 ಪ್ರಕರಣಗಳು ದಾಖಲಾಗಿವೆ. ಮೂರು ಹೊಸ ಕಾನೂನುಗಳ ಅಡಿಯಲ್ಲಿ ಒಟ್ಟು 80 ಎಫ್‌ಐಆರ್‌ಗಳನ್ನು ಸಹ ದಾಖಲಿಸಲಾಗಿದೆ.

ಮೂರು ಹೊಸ ಕ್ರಿಮಿನಲ್ ಕಾನೂನುಗಳು-ಭಾರತೀಯ ನ್ಯಾಯ ಸಂಹಿತಾ (BNS), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS), ಮತ್ತು ಭಾರತೀಯ ಸಾಕ್ಷಿ ಅಧಿನಿಯಮ್ (BSA) ಹೊಸ ಕಾನೂನುಗಳು ಜಾರಿಗೆ ಬಂದವು.

ಈ ಹೊಸ ಕಾನೂನುಗಳ ಅಡಿಯಲ್ಲಿ ವೈಟ್‌ಫೀಲ್ಡ್ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗಿವೆ. ಮೊದಲ ದಿನವೇ ಬೆಂಗಳೂರು ಆಗ್ನೇಯ ಭಾಗದಲ್ಲಿ ಆರು, ಪಶ್ಚಿಮದಲ್ಲಿ ಐದು, ದಕ್ಷಿಣ ಮತ್ತು ಪೂರ್ವದಲ್ಲಿ ನಾಲ್ಕು, ಈಶಾನ್ಯದಲ್ಲಿ ಮೂರು ಮತ್ತು ಉತ್ತರ ಮತ್ತು ಕೇಂದ್ರ ವಿಭಾಗದಲ್ಲಿ ತಲಾ ಎರಡು ಪ್ರಕರಣಗಳು ದಾಖಲಾಗಿವೆ. ಇತರೆ ನಾಲ್ಕು ಪ್ರಕರಣಗಳನ್ನು ಸಂಚಾರ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಹೊಸ ಕಾನೂನುಗಳ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಕಾನೂನು ಬದಲಾವಣೆಗೆ ಒಗ್ಗಿಕೊಳ್ಳಲು ಕನಿಷ್ಠ ಎರಡು ತಿಂಗಳು ಬೇಕು ಎಂದು ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಹೇಳಿದ್ದಾರೆ.

ಹೆಚ್ಚಿನ ಸುದ್ದಿ