Sunday, July 7, 2024
Homeಚುನಾವಣೆ 2023Rajasthan election : ಬೆಂಗಳೂರಿನಲ್ಲಿ ಬಟ್ಟೆ ವರ್ತಕ - ಈಗ ರಾಜಸ್ಥಾನದಲ್ಲಿ ಶಾಸಕ!

Rajasthan election : ಬೆಂಗಳೂರಿನಲ್ಲಿ ಬಟ್ಟೆ ವರ್ತಕ – ಈಗ ರಾಜಸ್ಥಾನದಲ್ಲಿ ಶಾಸಕ!

ಬೆಂಗಳೂರು : ನಗರದ ಚಿಕ್ಕಪೇಟೆಯಲ್ಲಿ (Chikkpet) ಜವಳಿ ಅಂಗಡಿ ನಡೆಸುತ್ತಿದ್ದ ಲಾಡೂ ಲಾಲ್‌ ಪಿಟ್ಲಿಯಾ (ladulal pitliya) ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ (Rajasthan election) ಗೆದ್ದು ಶಾಸಕರಾಗಿದ್ದಾರೆ. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಲಾಡುಲಾಲ್‌ ಬಿಜೆಪಿ ಅಭ್ಯರ್ಥಿಯಾಗಿ ಸಹರಾ (Sahara constituency) ಕ್ಷೇತ್ರದಿಂದ ಕಣಕ್ಕಿಳಿದಿದ್ದರು.

ಕಾಂಗ್ರೆಸ್‌ (Congress) ಪಕ್ಷದಿಂದ ಕಣಕ್ಕಿಳಿದಿದ್ದ ರಾಜೇಂದ್ರ ತ್ರಿವೇದಿ ಅವರಿಗೆ ಸೋಲುಣಿಸಿರುವ ಲಾಡೂ ಲಾಲ್‌ ಬರೋಬ್ಬರಿ 1.17 ಲಕ್ಷ ಮತ ಪಡೆದಿದ್ದು, 62 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದಾರೆ.

2021 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಲಾಡು ಲಾಲ್‌ ಬಳಿಕ ನಾಮಪತ್ರ ವಾಪಸ್‌ ಪಡೆದಿದ್ದರು.

ಹೆಚ್ಚಿನ ಸುದ್ದಿ