Sunday, July 7, 2024
Homeಕ್ರೈಂSuicide : ಯುವತಿ ಅನುಮಾನಾಸ್ಪದವಾಗಿ ಸಾವು - ವಿಷಸೇವನೆ ಶಂಕೆ!

Suicide : ಯುವತಿ ಅನುಮಾನಾಸ್ಪದವಾಗಿ ಸಾವು – ವಿಷಸೇವನೆ ಶಂಕೆ!

ಬೆಂಗಳೂರು: ಎಂಟನೇ ಮೈಲಿಯಲ್ಲಿ ದಾವಣಗೆರೆ ಮೂಲದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಶ್ರಾವಣಿ ಮೃತ ದುರ್ದೈವಿಯಾಗಿದ್ದು, ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಎಂಟನೇ ಮೈಲಿಯ ಗೋಲ್ಡನ್ ಜಿಮ್ ನಲ್ಲಿ ರಿಸೆಪ್ಶನಿಸ್ಸ್ಟ್ ಆಗಿ ಶ್ರಾವಣಿ ಕೆಲಸ ಮಾಡುತ್ತಿದ್ದಳು. ಎರಡು ದಿನಗಳ ಹಿಂದ ಕೆಲಸದ ಅವಧಿಯಲ್ಲಿ ಇದ್ದಕ್ಕಿದ್ದ ಆಕೆಗೆ ವಾಂತಿ ಶುರುವಾಗಿತ್ತು.ಈ ವೇಳೆ ಜಿಮ್ ಸಿಬ್ಬಂದಿಗಳು ಶ್ರಾವಣಿಯನ್ನ ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಚಿಕಿತ್ಸೆಗೆ ಸ್ಫಂದಿಸದ ಶ್ರಾವಣಿ ಮೃತಪಟ್ಟಿದ್ದಾಳೆ.ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆವ್ಯಕ್ತವಾಗಿದೆ. ದಾಸರಹಳ್ಳಿಯ ಬಾಗಲಗುಂಟೆಯ ಬಾಡಿಗೆ ಮನೆಯಲ್ಲಿ ಈಕೆ ನೆಲೆಸಿದ್ದಳು. ಈ ಹಿನ್ನಲೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಸುದ್ದಿ