Sunday, July 7, 2024
Homeಟಾಪ್ ನ್ಯೂಸ್TEAM INDIA : ಮೋದಿಗೆ ಜೆರ್ಸಿ ಕೊಟ್ಟ ಬಿಸಿಸಿಐ!

TEAM INDIA : ಮೋದಿಗೆ ಜೆರ್ಸಿ ಕೊಟ್ಟ ಬಿಸಿಸಿಐ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಬಿಸಿಸಿಐ (BCCI) ಟೀಂ ಇಂಡಿಯಾ (Team India) ಜೆರ್ಸಿಯನ್ನು ನೀಡಿದೆ.

ಇಂದು ವಿಶ್ವಕಪ್‌ ಸಾಧನೆಗೈದ ಟೀಂ ಇಂಡಿಯಾ ತಂಡವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕೃತ ನಿವಾಸದಲ್ಲಿ ಭೇಟಿಯಾದರು. ಈ ವೇಳೆ ಬಿಸಿಸಿಐ ಮೋದಿಗೆ ಟೀಂ ಇಂಡಿಯಾ ಜೆರ್ಸಿ ನೀಡಿದೆ. ವಿಶೇಷವೆಂದರೆ ಟೀಂ ಇಂಡಿಯಾ ಜರ್ಸಿಯ ಮೇಲೆ ನಮೋ 1 ಎಂದು ಬರೆಯಲಾಗಿದೆ. ಈ ಬಗ್ಗೆ ಬಿಸಿಸಿಐ ತನ್ನ ಎಕ್ಸ್‌ ಖಾತೆಯಲ್ಲಿ ಅಧಿಕೃತವಾಗಿ ಹಂಚಿಕೊಂಡಿದೆ.

ಎಕ್ಸ್‌ನಲ್ಲಿ ಭಾರತ ಕ್ರಿಕೆಟ್ ತಂಡವು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಯಿತು. ಸರ್, ನಿಮ್ಮ ಸ್ಪೂರ್ತಿದಾಯಕ ಮಾತುಗಳು ಮತ್ತು ಟೀ ಇಂಡಿಯಾಗೆ ನೀವು ನೀಡಿದ ಅಮೂಲ್ಯ ಬೆಂಬಲಕ್ಕಾಗಿ ನಾವು ನಿಮಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಬರೆದುಕೊಂಡಿದೆ.

ಹೆಚ್ಚಿನ ಸುದ್ದಿ