Sunday, July 7, 2024
Homeಟಾಪ್ ನ್ಯೂಸ್BBMP scandal: ಬಿಬಿಎಂಪಿಯಲ್ಲಿ ಭಾರೀ ಗೋಲ್ ಮಾಲ್ - ಬೋಗಸ್ ಖಾತೆಗಳಿಗೆ ನೂರು ಕೋಟಿ ರೂ....

BBMP scandal: ಬಿಬಿಎಂಪಿಯಲ್ಲಿ ಭಾರೀ ಗೋಲ್ ಮಾಲ್ – ಬೋಗಸ್ ಖಾತೆಗಳಿಗೆ ನೂರು ಕೋಟಿ ರೂ. ಹಣ!

ಬೆಂಗಳೂರು: ಎಸ್‌ ಟಿ ಬೋರ್ಡ್, ಮುಡಾ ಆಯ್ತು ಇದೀಗ ಬಿಬಿಎಂಪಿ ಮೇಲೆ ಗಂಭೀರ ಆರೋಪ ಕೇಳಿಬರುತ್ತಿದೆ. ಬರೋಬ್ಬರಿ 100 ಕೋಟಿ ಅವ್ಯವಹಾರದ ಆರೋಪ ಬಿಬಿಎಂಪಿ ವಿರುದ್ಧ ಕೇಳಿಬಂದಿದೆ.

ಸ್ವ ಉದ್ಯೋಗಕ್ಕಾಗಿ ಬಡವರಿಗೆ ಸಾಲದ ರೂಪದಲ್ಲಿ ಸೇರಬೇಕಾದ ಸಹಾಯಧನ ಬಿಬಿಎಂಪಿ ಅಧಿಕಾರಿಗಳ ಪಾಲಾಗಿದೆ. ಸರಿಯಾದ ಖಾತೆಗಳಿಗೆ ಹಣ ಹಂಚಿಕೆಯಾಗದೆ, ಬೋಗಸ್‌ ಖಾತೆ ಹಣ ವರ್ಗಾವಣೆ ಆಗಿದೆ ಎಂದು ಹೇಳಲಾಗುತ್ತಿದೆ. 2 ಸಾವಿರ ಜನರ ನಕಲಿ ಖಾತೆ ಸೃಷ್ಟಿಸಿ ಗೋಲ್ಮಾಲ್‌ ಮಾಡಲಾಗಿದೆ. ಮೋಸಕ್ಕೆ ಒಳಗಾದಂತ ಚಂದ್ರಶೇಖರ್‌ ಅಸಮಧಾನ ಹೊರಹಾಕಿದ್ದಾರೆ.

ಬಿಬಿಎಂಪಿಯ 8 ವಲಯದಲ್ಲಿ ಗೋಲ್ಮಾಲ್‌ ನಡೆದಿದೆ. ಕೊರೊನಾ ಸಮಯದ ಲಾಕ್ ಡೌನ್‌ ಸಮಯದಲ್ಲಿ ಹಣ ವರ್ಗಾವಣೆ ಶಂಕೆ.  ನಗರದ 23 ಸೊಸೈಟಿಗಳಿಗೆ ಹಣ ವರ್ಗಾವಣೆ ಆಗಿದ್ದು, ಯಾವ ಸೊಸೈಟಿಗಳಿಗೂ ಐಎಫ್ ಸಿ ಕೋಡ್‌ ಗಳಿಲ್ಲದಿರುವುದು ಅನುಮಾನಕ್ಕೆ ದಾರಿಯಾಗಿದೆ.

ಈ ಹಗರಣಕ್ಕೆ ಕಮಿಷನರ್‌ ಪ್ರತಿಕ್ರಿಯಿಸಿದ್ದು ಇದು ಗಂಭೀರವಾದ ಪ್ರಕರಣ. ಅಧಿಕಾರಿಗಳಿಂದ ಸರಿಯಾದ ಮಾಹಿತಿ ಪಡೆದುಕೊಂಡು ಸರಕಾರಕ್ಕೆ ಸಲ್ಲಿಸುತ್ತೇನೆ. ಆಮೇಲೆ ಲೋಕಾಯುಕ್ತರು ಈ ಗೋಲ್ಮಾಲ್‌ ಗೆ ಸಂಬಂಧಿಸಿ ತನಿಖೆ ಮಾಡಬಹುದು ಎಂದು ಹೇಳಿದ್ದಾರೆ.

ಹೆಚ್ಚಿನ ಸುದ್ದಿ