Sunday, July 7, 2024
Homeಟಾಪ್ ನ್ಯೂಸ್JOB ALERT: ಗ್ರಾಮೀಣ ಬ್ಯಾಂಕ್‌ಗಳಲ್ಲಿ ಉದ್ಯೋಗಾವಕಾಶ; ಹುದ್ದೆಗಳ ವಿವರ, ನೇಮಕಾತಿ ಹಂತಗಳ ಡೀಟೇಲ್ಸ್‌ ಇಲ್ಲಿದೆ

JOB ALERT: ಗ್ರಾಮೀಣ ಬ್ಯಾಂಕ್‌ಗಳಲ್ಲಿ ಉದ್ಯೋಗಾವಕಾಶ; ಹುದ್ದೆಗಳ ವಿವರ, ನೇಮಕಾತಿ ಹಂತಗಳ ಡೀಟೇಲ್ಸ್‌ ಇಲ್ಲಿದೆ

ಬೆಂಗಳೂರು: ಕರ್ನಾಟಕ ಗ್ರಾಮೀಣ ಬ್ಯಾಂಕ್​ ಸೇರಿದಂತೆ ದೇಶದ ವಿವಿಧ ಪ್ರಾದೇಶಿಕ ಬ್ಯಾಂಕಿಂಗ್​ ವಲಯದಲ್ಲಿನ (RRB) ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಇನ್ಸುಟಿಟ್ಯೂಟ್​ ಆಫ್​ ಬ್ಯಾಂಕಿಂಗ್​ ಪರ್ಸನಲ್​ ಸೆಲೆಕ್ಷನ್​ (IBPS) ಅಧಿಸೂಚನೆ ಹೊರಡಿಸಿದೆ. ಒಟ್ಟು 9,995 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆ ವಿವರ: ಒಟ್ಟು 9,995 ಹುದ್ದೆ ನೇಮಕಾತಿಯಲ್ಲಿ ಕರ್ನಾಟಕ ಗ್ರಾಮೀಣ​ ಬ್ಯಾಂಕ್​ನಲ್ಲಿ 386, ಕರ್ನಾಟಕ ವಿಕಾಸ್​ ಗ್ರಾಮೀಣ ಬ್ಯಾಂಕ್​ 200 ಹುದ್ದೆಗಳಿಗೆ ನೇಮಕಾತಿ.

ಆಫೀಸ್​ ಅಸಿಸ್ಟಂಟ್​​ 5,585
ಆಫೀಸರ್​ ಸ್ಕೇಲ್​ 2 – ಜನರಲ್​ ಬ್ಯಾಂಕಿಂಗ್​ ಆಫೀಸರ್​ 496
ಆಫೀಸರ್​ ಸ್ಕೇಲ್​ 2 (ಐಟಿ) – 94
ಆಫೀಸರ್​ ಸ್ಕೇಲ್​ -2 (ಸಿಎ) – 60
ಆಫೀಸರ್​ ಸ್ಕೇಲ್​ -2 (ಕಾನೂನು) -30
ಆಫೀಸರ್​ ಸ್ಕೇಲ್​ – 2(ಟ್ರೆಶರ್​ ಮ್ಯಾನೇಜರ್​ ) – 11
ಆಫೀಸರ್​ ಸ್ಕೇಲ್​ -2 (ಅಗ್ರಿಕಲ್ಚರ್​ ಆಫೀಸರ್​) -70
ಆಫೀಸರ್​ ಸ್ಕೇಲ್​-3 (ಸೀನಿಯರ್​ ಮ್ಯಾನೇಜರ್​ – 129
ಆಫೀಸರ್​ ಸ್ಕೇಲ್​ -1 (ಅಸಿಸ್ಟಂಟ್​ ಮ್ಯಾನೇಜರ್​) -3,499

ವಿದ್ಯಾರ್ಹತೆ: ಆಫೀಸರ್​ ಸ್ಕೇಲ್​- 1ನ ಅಸಿಸ್ಟೆಂಟ್​ ಮ್ಯಾನೇಜರ್ ಹುದ್ದೆ ಮತ್ತು ಆಫೀಸರ್​ ಸ್ಕೇಲ್​ -3ಯ ಸೀನಿಯರ್​ ಮ್ಯಾನೇಜರ್​​, ಆಫೀಸ್​ ಅಸಿಸ್ಟೆಂಟ್​ನ ಹುದ್ದೆಗಳಿಗೆ ಅಭ್ಯರ್ಥಿಗಳು ಪದವಿಯನ್ನು ಪೂರ್ಣಗೊಳಿಸಿರಬೇಕು, ಆಫೀಸರ್​ ಸ್ಕೇಲ್​ 2- ಮ್ಯಾನೇಜರ್​ ಹುದ್ದೆಗೆ ಸಿಎ, ಎಲ್​ಎಲ್​ಬಿ, ಎಂಬಿಎ ಪದವಿಯನ್ನು ಹೊಂದಿರಬೇಕು.

ವಯೋಮಿತಿ: ಅಭ್ಯರ್ಥಿಗಳು ವಿವಿಧ ಸ್ಕೇಲ್​ಗೆ ಅನುಗುಣವಾಗಿ ವಯೋಮಿತಿ ಹೊಂದಿದ್ದು, ಕನಿಷ್ಠ 18 ರಿಂದ ಗರಿಷ್ಠ 40 ವರ್ಷವಾಗಿದೆ. ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ 175 ರೂ, ಇತರ ಅಭ್ಯರ್ಥಿಗಳಿಗೆ 850 ರೂ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಗಳಿದ್ದು, ಇದೆರಡರಲ್ಲೂ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಸಂದರ್ಶನ ಮೂಲಕ ನೇಮಕಾತಿ ಮಾಡಲಾಗುವುದು.

ಈ ಹುದ್ದೆಗೆ ಜೂನ್​ 7ರಿಂದ ಅರ್ಜಿ ಸಲ್ಲಿಕೆ ಪರೀಕ್ಷೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಜುಲೈ 27 ಆಗಿದೆ. ಕಾಲ್​ ಲೆಟರ್​, ಪರೀಕ್ಷೆ ಸಮಯದ ದಿನ ಸೇರಿದಂತೆ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ibps.in ಇಲ್ಲಿಗೆ ಭೇಟಿ ನೀಡಿ.

ಹೆಚ್ಚಿನ ಸುದ್ದಿ