Sunday, July 7, 2024
Homeಕ್ರೀಡೆT20 WORLD CUP: ಭಾರತದ ವಿರುದ್ಧ ಟಾಸ್‌ ಗೆದ್ದ ಬಾಂಗ್ಲಾದೇಶ

T20 WORLD CUP: ಭಾರತದ ವಿರುದ್ಧ ಟಾಸ್‌ ಗೆದ್ದ ಬಾಂಗ್ಲಾದೇಶ

ವೆಸ್ಟ್‌ ಇಂಡೀಸ್‌: ಭಾರತದ (India) ವಿರುದ್ಧ ಬಾಂಗ್ಲಾದೇಶ (Bangladesh) ಟಾಸ್‌ ಗೆದ್ದು ಫಿಲ್ಡಿಂಗ್‌ ಆಯ್ದುಕೊಂಡಿದೆ.

ವೆಸ್ಟ್‌ ಇಂಡೀಸ್‌ನ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2024 ರ ಟಿ20 ವಿಶ್ವಕಪ್‌ನ (T20 World Cup) ಸೂಪರ್-8 ಹಂತದಲ್ಲಿ ಉಭಯ ತಂಡಗಳ ಎರಡನೇ ಪಂದ್ಯ ಇದಾಗಿದೆ. ಈ ಹಿಂದೆ ಭಾರತ ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿತ್ತು. ಆದರೆ ಬಾಂಗ್ಲಾದೇಶ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು.

ಭಾರತ ಪರ:
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್‌ ಕೀಪರ್‌), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ.

ಬಾಂಗ್ಲಾದೇಶ ಪರ:
ತಂಝಿದ್ ಹಸನ್, ಲಿಟ್ಟನ್ ದಾಸ್ (ವಿಕೆಟ್‌ ಕೀಪರ್‌), ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ತೌಹಿದ್ ಹೃದಯೋಯ್, ಶಕೀಬ್ ಅಲ್ ಹಸನ್, ಮಹ್ಮುದುಲ್ಲಾ, ಜಾಕರ್ ಅಲಿ, ರಿಶಾದ್ ಹೊಸೈನ್, ಮಹೇದಿ ಹಸನ್, ತಂಝಿಮ್ ಹಸನ್ ಸಾಕಿಬ್, ಮುಸ್ತಫಿಜುರ್ ರೆಹಮಾನ್.

ಹೆಚ್ಚಿನ ಸುದ್ದಿ