Sunday, July 7, 2024
Homeಕ್ರೈಂBADMINTON PLAYER: ಪಂದ್ಯದ ವೇಳೆ ಕುಸಿದು ಬಿದ್ದು ಮೃತಪಟ್ಟ ಬ್ಯಾಡ್ಮಿಂಟನ್‌ ಆಟಗಾರ ; VIDEO

BADMINTON PLAYER: ಪಂದ್ಯದ ವೇಳೆ ಕುಸಿದು ಬಿದ್ದು ಮೃತಪಟ್ಟ ಬ್ಯಾಡ್ಮಿಂಟನ್‌ ಆಟಗಾರ ; VIDEO

ಇಂಡೋನೇಷ್ಯಾ: 17 ವರ್ಷದ ಚೀನಾದ ಬ್ಯಾಡ್ಮಿಂಟನ್‌ ಆಟಗಾರನೊಬ್ಬ (Badminton Player) ಪಂದ್ಯದ ವೇಳೆ ಹೃದಯಸ್ತಂಭನದಿಂದ (cardiac arrest) ಮೃತಪಟ್ಟ ಘಟನೆ ಇಂಡೋನೇಷ್ಯಾದ (Indonesia) ಯೋಗಕರ್ತದಲ್ಲಿ ನಡೆದಿದೆ.

ಜಾಂಗ್ ಝಿಜಿ (17) ಮೃತ ಬ್ಯಾಡ್ಮಿಂಟನ್‌ ಆಟಗಾರ. ಏಷ್ಯಾ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಜಪಾನ್‌ನ ಕಜುಮಾ ಕವಾನೊ ವಿರುದ್ಧ ಜಾಂಗ್ ಝಿಜಿ ಸ್ಪರ್ಧಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಅಂಗಣದಲ್ಲಿ ಕುಸಿದು ಬಿದ್ದರು.

ಸ್ಥಳದಲ್ಲಿ ತಕ್ಷಣದ ವೈದ್ಯಕೀಯ ಆರೈಕೆ ಮಾಡಲಾದರೂ ಆಂಬ್ಯುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ತ್ವರಿತವಾಗಿ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಎಎಫ್‌ಪಿ ಇಂಡೋನೇಷ್ಯಾದ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ವಕ್ತಾರ ಬ್ರೋಟೊ ಹ್ಯಾಪಿ ಮಾತನಾಡಿ, ಜಾಂಗ್‌ ಝಿಜಿ ಅವರು ಹಠಾತ್ ಹೃದಯ ಸ್ತಂಭನವನ್ನು ಅನುಭವಿಸಿ ಮೃತ ಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಹೆಚ್ಚಿನ ಸುದ್ದಿ