Sunday, July 7, 2024
Homeಟಾಪ್ ನ್ಯೂಸ್VIRAL NEWS : ದುಬಾರಿ ಕಾರಿನ ಬೆಲೆಗೆ ಮಾರಾಟವಾದ ವಿಜಯಪುರದ ಎತ್ತು 

VIRAL NEWS : ದುಬಾರಿ ಕಾರಿನ ಬೆಲೆಗೆ ಮಾರಾಟವಾದ ವಿಜಯಪುರದ ಎತ್ತು 

ರೈತನ ಮಿತ್ರ ಎತ್ತುಗಳು ಎಷ್ಟು ದರಕ್ಕೆ ಮಾರಾಟವಾಗುತ್ವೆ..  ಅಬ್ಬಬ್ಬಾ ಅಂದ್ರೆ 1 ರಿಂದ 1.15 ಲಕ್ಷದ ವರೆಗೆ ಮಾರಾಟವಾಗಬಹುದು. ವಿಜಯಪುರ ಜಿಲ್ಲೆಯ ಒಂದೆ ಎತ್ತು ದುಬಾರಿ ಕಾರಿಗು ಅಧಿಕ ರೇಟಿಗೆ ಮಾರಾಟವಾಗಿ ದಾಖಲೆ ಬರೆದಿದೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದ ರಾಮನಗೌಡ ಪಾಟೀಲ್ ಎಂಬವರ ಎತ್ತು ಬರೋಬ್ಬರಿ 18 ಲಕ್ಷ 1 ಸಾವಿರ ರೂಪಾಯಿಗೆ ಮಾರಾಟವಾಗಿ ದಾಖಲೆ ಬರೆದಿದೆ.

ಕಳೆದ ಕೆಲ ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಇಟ್ನಾಳ ಗ್ರಾಮದ ರೈತ ಸದಾಶಿವ ಡಾಂಗೆ 18 ಲಕ್ಷ ರೂಪಾಯಿಗೆ ಎತ್ತು ಖರೀದಿ ಮಾಡಿದ್ದಾರೆ. ಎತ್ತಿನ ಬಗ್ಗೆ ಮೊದಲೇ ತಿಳಿದಿದ್ದ ಸದಾಶಿವ ಡಾಂಗೆ ಹಠಕ್ಕೆ ಬಿದ್ದು 18 ಲಕ್ಷ 1 ಸಾವಿರ ರೂಪಾಯಿಗೆ ಎತ್ತು ಖರೀದಿ ಮಾಡಿದ್ದಾರೆ.

ಕಳೆದ ಮೂರು ವರ್ಷದ ಹಿಂದೆ ಸಿದ್ದನಗೌಡ 1 ಲಕ್ಷ 5ಸಾವಿರ ರೂಪಾಯಿಗೆ ವಿಜಯಪುರ ಜಿಲ್ಲೆಯ ಕೊರ್ತಿ ಕೋಲ್ಹಾರದಿಂದ ಖರೀದಿ ಮಾಡಿ ತಂದಿದ್ದರು. ಎತ್ತು ಖರೀದಿ ಮಾಡಿ ತಂದ ಮೂರೇ ವರ್ಷದಲ್ಲಿ ಎತ್ತು 18 ಲಕ್ಷಕ್ಕೆ ಮಾರಾಟವಾಗಿದೆ.

18 ಲಕ್ಷಕ್ಕೆ ದಾಖಲೆ ದರಕ್ಕೆ ಸೇಲ್‌ ಆಗಿರೋ ಎತ್ತಿಗೆ ಬಬಲಾದಿಯ ಸಿದ್ದನಗೌಡ ಪಾಟೀಲ್‌ ಪ್ರೀತಿಯಿಂದ ಹಿಂದೂಸ್ತಾನ್‌ ಹೆಚ್.ಪಿ ಎಂದು ಹೆಸರಿಟ್ಟಿದ್ದರು. ಅಲ್ಲದೆ ಮನೆ ಮಗನಂತೆ ಎತ್ತನ್ನು ಸಾಕಿದ್ದರು. 

ವಿಶೇಷ ಅಂದರೆ, ಹಿಂದೂಸ್ತಾನ್‌ ಹೆಚ್.ಪಿ. ಎತ್ತು ಬಾಗಲಕೋಟೆ, ಯಾದಗಿರಿ, ಬೆಳಗಾವಿ, ವಿಜಯಪುರ ಸೇರಿದಂತೆ ನೆರೆಯ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ಸೇರಿದಂತೆ ಅನೇಕ ಕಡೆಗಳಲ್ಲಿ ನಡೆದ ತೆರೆಬಂಡೆ ಸ್ಪರ್ಧೆಯಲ್ಲಿ ಹಿಂದೂಸ್ತಾನ್‌ ಹೆಚ್‌ ಪಿ ಪಾಲ್ಗೊಂಡಿತ್ತು.

 ಈ ವರೆಗೆ ಮೂರು ಬೈಕ್‌, 40ಗ್ರಾಂ ಚಿನ್ನ, 2 ಬೆಳ್ಳಿ ಗಧೆ, 10 ಲಕ್ಷಕ್ಕು ಅಧಿಕ ಹಣವನ್ನ ಬಹುಮಾನ ರೂಪದಲ್ಲಿ ಗೆದ್ದು ತಂದಿದೆ. ಇದೀಗ ದೊಡ್ಡ ಮೊತ್ತಕ್ಕೆ ಎತ್ತು ಮಾರಾಟವಾಗಿದ್ದು, ಎಲ್ಲರು ಹುಬ್ಬೇರಿಸುವಂತೆ ಮಾಡಿದೆ. 

ಹೆಚ್ಚಿನ ಸುದ್ದಿ