Sunday, July 7, 2024
Homeಟಾಪ್ ನ್ಯೂಸ್Asteroid: ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ಮನುಕುಲವೇ ನಿರ್ನಾಮ: ಸೋಮನಾಥ್

Asteroid: ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ಮನುಕುಲವೇ ನಿರ್ನಾಮ: ಸೋಮನಾಥ್

ನವದೆಹಲಿ: ಅಪೋಸಿಸ್‌ ಪ್ರಸ್ತುತ ಯುಗದ ಅಂತ್ಯಕ್ಕೆ ಕಾರಣವಾಗಬಹುದಾದ ಅತ್ಯಂತ ಅಪಾಯಕಾರಿ ಕ್ಷುದ್ರಗ್ರಹವಾಗಿದೆ. ಇದು ಭೂಮಿಗೆ ಅಪ್ಪಳಿಸಿತು ಎಂದಾದರೆ ಈ ಹಿಂದೆ ಡೈನೋಸಾರ್‌ಗಳ ಯುಗ ಅಂತ್ಯ ಕಂಡಂತೆ ಇಡೀ ಮನುಕುಲವೇ ನಾಶವಾಗಬಹುದು ಎಂದು ಇಸ್ರೋ ಮುಖ್ಯಸ್ಥ ಸೋಮನಾಥ್ ಹೇಳಿದ್ದಾರೆ.

370 ಮೀಟರ್ ವ್ಯಾಸವುಳ್ಳ ಅಪೋಸಿಸ್‌ ಕ್ಷುದ್ರಗ್ರಹ 2029ರ ಏಪ್ರಿಲ್ 13ರಂದು ಹಾಗೂ 2036ರಲ್ಲಿ ಭೂಮಿಯ ಅತ್ಯಂತ ಸಮೀಪದಿಂದ ಹಾದು ಹೋಗಲಿದೆ. ನಾನು ಈ ಹಿಂದೆ ಗುರುಗ್ರಹಕ್ಕೆ ಶೂಮೇಕರ್-ಲೆವಿಯಂತಹ ಕ್ಷುದ್ರಗ್ರಹಗಳು ಹೊಡೆದಿರುವುದನ್ನು ವೀಕ್ಷಿಸಿದ್ದೇನೆ. ಇಂತಹ ಘಟನೆ ಭೂಮಿಯ ಮೇಲೆ ಆದರೆ ನಾವೆಲ್ಲರೂ ನಿರ್ನಾಮವಾಗುತ್ತೇವೆ ಎಂದರು.

ಭೂಮಿಗೆ ಕ್ಷುದ್ರಗ್ರಹಗಳು ಅಪ್ಪಳಿಸುವ ಸಾಧ್ಯತೆಗಳು ನಿಜವಾಗಿಯೂ ಇದೆ. ಇದನ್ನು ತಡೆಯಲು ನಾವು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕಾಗಿದೆ ಎಂದು ಸೋಮನಾಥ್‌ ತಿಳಿಸಿದ್ದಾರೆ.

 

ಹೆಚ್ಚಿನ ಸುದ್ದಿ