Sunday, July 7, 2024
Homeಟಾಪ್ ನ್ಯೂಸ್VIRAL VIDEO: ನಿಮಗೆ ಯಾರು ಸಂಬಳ ಕೊಡುತ್ತಾರೆ? : ಪೊಲೀಸರನ್ನು ನಿಂದಿಸಿದ ಸಚಿವರ ಪತ್ನಿ; VIDEO

VIRAL VIDEO: ನಿಮಗೆ ಯಾರು ಸಂಬಳ ಕೊಡುತ್ತಾರೆ? : ಪೊಲೀಸರನ್ನು ನಿಂದಿಸಿದ ಸಚಿವರ ಪತ್ನಿ; VIDEO

ಹೈದರಾಬಾದ್‌: ಆಂಧ್ರಪ್ರದೇಶದ ಸಚಿವರೊಬ್ಬರ ಪತ್ನಿ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದಾಗ ಪೊಲೀಸ್ ಅಧಿಕಾರಿಯೊಬ್ಬರಿಗೆ ಛೀಮಾರಿ ಹಾಕಿರುವ ವಿಡಿಯೋ ವೈರಲ್ ಆಗಿದ್ದು, ವಿವಾದ ಸೃಷ್ಟಿಸಿದೆ.

ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ಅವರ ಪತ್ನಿ ಹರಿತಾ ರೆಡ್ಡಿ ಸ್ಥಳೀಯ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಅನ್ನಮಯ್ಯ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿ ಕುಳಿತಿದ್ದ ಸಚಿವರ ಪತ್ನಿ 30 ನಿಮಿಷಗಳ ಕಾಲ ಕಾಯಬೇಕಾಯಿತು ಎಂದು ಸಬ್ ಇನ್ಸ್‌ಪೆಕ್ಟರ್‌ ರಮೇಶ್‌ಗೆ ಛೀಮಾರಿ ಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ವಿಡಿಯೋದಲ್ಲಿ ಪೊಲೀಸರಿಗೆ ಸಚಿವರ ಪತ್ನಿ, ಇನ್ನೂ ಬೆಳಗಾಗಲಿಲ್ಲವೇ? ನೀವು ಯಾವ ಕಾನ್ಫರೆನ್ಸ್ ಮಾಡಿದ್ದೀರಿ? ನೀವು ಮದುವೆಗೆ ಬಂದಿದ್ದೀರಾ ಅಥವಾ ಡ್ಯೂಟಿಗೆ ಬಂದಿದ್ದೀರಾ? ನಿಮಗಾಗಿ ಅರ್ಧ ಗಂಟೆ ಕಾಯುತ್ತಿದ್ದೆವು. ನಿಮ್ಮ ಸಂಬಳ ಯಾರು ಕೊಡುತ್ತಾರೆ? ಸರ್ಕಾರವಾ ಅಥವಾ ವೈಎಸ್‌ಆರ್‌ಸಿಪಿ? ಎಂದು ಪ್ರಶ್ನಿಸಿದ್ದಾರೆ.

ವೀಡಿಯೊದ ಕೊನೆಯಲ್ಲಿ, ಸಬ್ ಇನ್ಸ್‌ಪೆಕ್ಟರ್ ಹರಿತಾ ರೆಡ್ಡಿಗೆ ಸೆಲ್ಯೂಟ್ ಹೊಡೆದು, ಬೆಂಗಾವಲು ಪಡೆಯನ್ನು ಮುನ್ನಡೆಸುವಂತೆ ಸೂಚಿಸಿದ್ದಾರೆ.

ಘಟನೆಗೆ ಸಂಬಂಧಿಸಿ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಎಕ್ಸ್‌ನಲ್ಲಿ ಸಚಿವರ ಪತ್ನಿಯನ್ನು ತರಾಟೆಗೆ ತೆಗೆದುಕೊಂಡಿದೆ. ಸಚಿವರ ಪತ್ನಿಗೂ ರಾಜ ಮರ್ಯಾದೆ ಬೇಕು. ರಾಯಚೋಟಿಯಲ್ಲಿ ಬೆಂಗಾವಲು ಪಡೆಯುವಂತೆ ಪೊಲೀಸರಿಗೆ ಸಚಿವ ರಾಮಪ್ರಸಾದ್ ರೆಡ್ಡಿ ಪತ್ನಿ ರುಬಾಬು. ಪೊಲೀಸರನ್ನು ನೋಡಿ ಜೀತದಾಳುಗಳಂತೆ ವಾರ್ನಿಂಗ್ ನೀಡಿದ ಸಚಿವರ ಪತ್ನಿ. ಗಾಬರಿಗೊಂಡ ಪೊಲೀಸರು… ಅಸಹಾಯಕ ಸ್ಥಿತಿಯಲ್ಲಿದ್ದ ಆಕೆಗೆ ನಮಸ್ಕಾರಗಳು ಎಂದು ಕಿಡಿಕಾರಿದೆ.

ಹೆಚ್ಚಿನ ಸುದ್ದಿ