Sunday, July 7, 2024
Homeಆಧ್ಯಾತ್ಮAmarnath Yatra: ಮೊದಲ ದಿನ ಅಮರನಾಥನ ದರ್ಶನ ಪಡೆದವರೆಷ್ಟು ಜನ ಗೊತ್ತೇ?

Amarnath Yatra: ಮೊದಲ ದಿನ ಅಮರನಾಥನ ದರ್ಶನ ಪಡೆದವರೆಷ್ಟು ಜನ ಗೊತ್ತೇ?

ಶ್ರೀನಗರ: ಅಮರನಾಥ ಯಾತ್ರೆಯು ಶನಿವಾರ ಪ್ರಾರಂಭವಾಗಿದೆ. ಯಾತ್ರಾರ್ಥಿಗಳು ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿ 3,880 ಮೀಟರ್ ಎತ್ತರದಲ್ಲಿರುವ ಗುಹೆಯಲ್ಲಿರುವ ಐಸ್ ಶಿವಲಿಂಗಕ್ಕೆ ಚಾರಣವನ್ನು ಪ್ರಾರಂಭಿಸಿದ್ದಾರೆ.

ಶನಿವಾರ ಆರಂಭವಾದ ಯಾತ್ರೆಯ ಮೊದಲ ದಿನವೇ 13000ಕ್ಕೂ ಹೆಚ್ಚು ಭಕ್ತರು ಅಮರನಾಥ ಗುಹೆಯ ದೇಗುಲದಲ್ಲಿ ದರ್ಶನ ಪಡೆದಿದ್ದಾರೆ.

ಯಾತ್ರಿಗಳ ಬ್ಯಾಚ್‌ಗಳನ್ನು ಬಾಲ್ಟಾಲ್ ಮತ್ತು ನುನ್ವಾನ್ (ಪಹಲ್ಗಾಮ್)ನ ಎರಡು ಮೂಲ ಶಿಬಿರಗಳಿಂದ ಹೊರಡಿಸಲಾಗಿದೆ. ದೇವಾಲಯದ ಮಾರ್ಗಗಳಲ್ಲಿ ವೈದ್ಯಕೀಯ ನೆರವು, ಆಹಾರ ಸರಬರಾಜು ಮತ್ತು ವಿಶ್ರಾಂತಿ ಪ್ರದೇಶಗಳ ಜೊತೆಗೆ ಬಿಗಿಯಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಯಾತ್ರಿಗಳಿಗೆ ಉತ್ತಮ ಅನುಕೂಲತೆಯೊಂದಿಗೆ ತೀರ್ಥಯಾತ್ರೆಗೆ ಸಹಾಯ ಮಾಡುತ್ತಿದ್ದಾರೆ. ಈ ಬಾರಿ ಮಂಜುಗಡ್ಡೆಯಿಂದ ಶಿವನ ಲಿಂಗವು ಸಂಪೂರ್ಣವಾಗಿ ರೂಪುಗೊಂಡಿದೆ ಎಂದು ಭಕ್ತರು ಹೇಳಿದ್ದಾರೆ.

ಯಾತ್ರಿಗಳು ಸಾಂಪ್ರದಾಯಿಕ 48 ಕಿಮೀ ಉದ್ದದ ಪಹಲ್ಗಾಮ್ ಬೇಸ್ ಕ್ಯಾಂಪ್ ಬಳಸುತ್ತಾರೆ. ಇದು ಗುಹಾ ದೇವಾಲಯವನ್ನು ತಲುಪಲು 4 ದಿನಗಳನ್ನು ತೆಗೆದುಕೊಳ್ಳುತ್ತದೆ. ಅಮರನಾಥ ಗುಹಾ ದೇಗುಲವನ್ನು ತಲುಪಲು ಯಾತ್ರಾರ್ಥಿಗಳಿಗೆ ಹೆಲಿಕಾಪ್ಟರ್ ಸೇವೆಗಳು ಲಭ್ಯವಿದೆ.

ಈ ವರ್ಷ 3.50 ಲಕ್ಷ ಯಾತ್ರಾರ್ಥಿಗಳು ಯಾತ್ರೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಆಗಸ್ಟ್ 19ರ ರಕ್ಷಾ ಬಂಧನ ಹಬ್ಬದೊಂದಿಗೆ ಯಾತ್ರೆ ಕೊನೆಗೊಳ್ಳಲಿದೆ.

ಹೆಚ್ಚಿನ ಸುದ್ದಿ