Sunday, July 7, 2024
Homeಟಾಪ್ ನ್ಯೂಸ್Air Pollution: ವಾಯುಮಾಲಿನ್ಯದಿಂದ ಸಾಯುವವರ ಸಂಖ್ಯೆ ಏರಿಕೆ – ಜನರಲ್ಲಿ ಹೆಚ್ಚಿದ ಆತಂಕ

Air Pollution: ವಾಯುಮಾಲಿನ್ಯದಿಂದ ಸಾಯುವವರ ಸಂಖ್ಯೆ ಏರಿಕೆ – ಜನರಲ್ಲಿ ಹೆಚ್ಚಿದ ಆತಂಕ

ಬೆಂಗಳೂರು: ಪ್ರತಿ ವರ್ಷ ಕೆಲ ನಗರಗಳಲ್ಲಿ 33 ಸಾವಿರ ಜನರು ವಾಯು ಮಾಲಿನ್ಯದಿಂದ ಸಾಯುತ್ತಿದ್ದಾರೆ. ಇದು ಇತ್ತೀಚಿನ ಅಧ್ಯಯನದಲ್ಲಿ ಬಹಿರಂಗಗೊಂಡ ಸಂಗತಿ. ದೇಶದಲ್ಲೀಗ ವಾಯುಮಾಲಿನ್ಯ ದೊಡ್ಡ ಸಮಸ್ಯೆಯಾಗಿದೆ.

ದೆಹಲಿ ಸೇರಿದಂತೆ ದೇಶದ ದೊಡ್ಡ ನಗರಗಳಲ್ಲಿ ಪ್ರತಿ ವರ್ಷ ಸಾವಿರಾರು ಜನರು ವಾಯು ಮಾಲಿನ್ಯದಿಂದ ಸಾಯುತ್ತಿದ್ದಾರೆ. ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಸೇರಿದಂತೆ ಅನೇಕ ನಗರಗಳಲ್ಲಿ ಮಾಲಿನ್ಯ ಅತೀ ಹೆಚ್ಚು ಪರಿಣಾಮ ಬೀರುತ್ತಿದೆ.

ಅತಿ ಹೆಚ್ಚು ಸಾವುಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಭವಿಸುತ್ತಿವೆ. ಲ್ಯಾನ್ಸೆಟ್‌ನ ಹೊಸ ಅಧ್ಯಯನ ಹಲವು ಮಹತ್ವದ ಸಂಗತಿಗಳನ್ನು ಬೆಳಕಿಗೆ ತಂದಿದೆ.

ದೇಶದ 10 ದೊಡ್ಡ ನಗರಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ. ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಮುಂಬೈ, ಪುಣೆ, ಶಿಮ್ಲಾ ಮತ್ತು ವಾರಣಾಸಿಯಲ್ಲಿ ಪ್ರತಿ ವರ್ಷ ಸರಾಸರಿ 33,000 ಕ್ಕೂ ಹೆಚ್ಚು ಸಾವುಗಳು ವಾಯು ಮಾಲಿನ್ಯದಿಂದ ಸಂಭವಿಸುತ್ತಿವೆ ಎಂದು ತಿಳಿದುಬಂದಿದೆ.

ಹೆಚ್ಚಿನ ಸುದ್ದಿ