Sunday, July 7, 2024
Homeಟಾಪ್ ನ್ಯೂಸ್BREAKING : ಹಿರಿಯ ನಟ ಶತ್ರುಘ್ನ ಸಿನ್ಹಾ ಆಸ್ಪತ್ರೆಗೆ ದಾಖಲು..!

BREAKING : ಹಿರಿಯ ನಟ ಶತ್ರುಘ್ನ ಸಿನ್ಹಾ ಆಸ್ಪತ್ರೆಗೆ ದಾಖಲು..!

ಮುಂಬೈ: ಬಾಲಿವುಡ್ ಖ್ಯಾತ ಹಿರಿಯ ನಟ ಹಾಗೂ ರಾಜಕಾರಣಿ ಶತ್ರುಘ್ನ ಸಿನ್ಹಾ (77) ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಕಳೆದೆರಡು ದಿನಗಳಿಂದ ಅವರಿಗೆ ವೈರಲ್ ಜ್ವರ ಮತ್ತು ವೀಕ್ನೆಸ್ (ದೌರ್ಬಲ್ಯ) ಸಮಸ್ಯೆ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ದಿಢೀರನೇ ಅವರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಟನ ಪುತ್ರ ಲುವ್ ಸಿನ್ಹಾ ಅವರು ಖಚಿತ ಪಡಿಸಿದ್ದಾರೆ.

ಶತ್ರುಘ್ನ ಸಿನ್ಹಾ ಅವರ ಪುತ್ರಿ ಹಾಗೂ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಅವರು ಜೂ.23ರಂದು ಜಹೀರ್ ಇಕ್ಬಾಲ್ ಎಂಬುವವರೊಡನೆ ವಿವಾಹ ಆಗಿದ್ದು ಗೊತ್ತೇ ಇದೆ.

ಹೆಚ್ಚಿನ ಸುದ್ದಿ