Sunday, July 7, 2024
HomeಬೆಂಗಳೂರುActor Darshan : ಒಂದಲ್ಲಾ ಎರಡಲ್ಲಾ ಸ್ಯಾಂಡಲ್‌ ವುಡ್‌ ದಾಸನ ವಿವಾದಗಳ ಇತಿಹಾಸ!

Actor Darshan : ಒಂದಲ್ಲಾ ಎರಡಲ್ಲಾ ಸ್ಯಾಂಡಲ್‌ ವುಡ್‌ ದಾಸನ ವಿವಾದಗಳ ಇತಿಹಾಸ!

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ರನ್ನು ಪೊಲೀಸರು ಬಂಧನ್ಕಕೊಳಪಡಿಸಿದ್ದಾರೆ.  ದರ್ಶನ್‌ ಸಮ್ಮುಖದಲ್ಲಿಯೇ ಕೊಲೆ ನಡೆದಿದೆ ಎನ್ನುವುದು ಒಂದು ವಾದವಾದರೆ, ಸ್ವತಃ ದರ್ಶನ್‌ ಅವರೇ ಹಲ್ಲೆ ನಡೆಸಿ ಈ ಹತ್ಯೆಯನ್ನು ಮಾಡಿದ್ದಾರೆಂಬ ಊಹಾಪೋಹವೂ ಕೇಳಿಬರುತ್ತಿದೆ. ಎಲ್ಲಾ ವಿಚಾರಗಳೂ ಪೊಲೀಸ್‌ ತನಿಖೆಯ ಬಳಿಕ ಬಯಲಾಗಲಿದೆಯಾದರೂ, ನಟ ದರ್ಶನ್‌ ಬಗ್ಗೆ ತಿಳಿದವರಿಗೆ ಇದು ಆಶ್ಚರ್ಯಕರ ಸುದ್ದಿಯೇ ಅಲ್ಲ.

ಈ ಹಿಂದೆಯೂ ಸಹ ಹತ್ತು ಹಲವು ಪ್ರಕರಣಗಳಲ್ಲಿ ದರ್ಶನ್‌ ಹೆಸರು ಕೆಡಿಸಿಕೊಂಡಿದ್ದರು. ಹೆಂಡತಿಯನ್ನು ಸಿಗರೇಟಿನಿಂದ ಸುಟ್ಟು ವಿಕೃತಿ ಮೆರೆದ ಆರೋಪದಿಂದ ಹಿಡಿದು, ಹೊಟೇಲ್‌ ಸಪ್ಲೈಯರ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪದವರೆಗೂ ದರ್ಶನ್‌ ಕುಖ್ಯಾತಿ ಪಡೆದಿದ್ದಾರೆ. ದರ್ಶನ್‌ ಮೇಲಿರುವ ಪ್ರಕರಣಗಳ ಸಣ್ಣ ಝಲಕ್‌ ಇಲ್ಲಿದೆ.

  • 2011 ರಲ್ಲಿ ದರ್ಶನ್‌ ವಿರುದ್ದ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ಬಯಲಾಗಿತ್ತು. ಸಿಗರೇಟಿನಿಂದ ಸುಟ್ಟು ವಿಕೃತಿ ಮೆರೆದಿದ್ದರೆಂದು ಪತ್ನಿ ದೂರಿದ್ದರು.   ನಟಿ ನಿಖಿತಾ ತುಕ್ರಾಲ್‌ ವಿಷಯದಲ್ಲಿ ಕಿರಿಕ್‌ ಶುರುವಾಗಿದ್ದೇ ಹಲ್ಲೆಗೆ ಕಾರಣ ಎನ್ನಲಾಗಿತ್ತು.  ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ದರ್ಶನ್‌  28 ದಿನ ಜೈಲುವಾಸವನ್ನೂ ಅನುಭವಿಸಿದ್ದರು.  ಹಿರಿಯ ನಟ ಅಂಬರೀಶ್‌ ಸಮ್ಮುಖದಲ್ಲಿ ರಾಜಿ ಸಂಧಾನ ನಡೆದು ಪ್ರಕರಣ ಸುಖಾಂತ್ಯ ಕಂಡಿತ್ತು.
  • 2021  ಪ್ರಿನ್ಸ್‌ ಹೋಟೆಲ್‌ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ ವಿವಾದಕ್ಕಡೆಮಾಡಿಕೊಟ್ಟಿತ್ತು.  ಮದ್ಯದ ಅಮಲಿನಲ್ಲಿ ಊಟ ನಿಧಾನವಾಗಿ ತಂದಿದ್ದಕ್ಕೆ ಸಪ್ಲೈಯರ್‌ ಮೇಲೆ ಹಲ್ಲೆ ನಡೆಸಿ ಸಪ್ಲೈಯರ್‌ ಕಣ್ಣಿಗೆ  ಭಾರೀ ಪೆಟ್ಟಾಗಿದೆಯೆನ್ನಲಾಗಿತ್ತು. ಈ ಪ್ರಕರಣದಲ್ಲಿ ದರ್ಶನ್‌ ರನ್ನು ರಕ್ಷಿಸಲಾಗಿದೆ ಎಂದು ಪತ್ರಕರ್ತ ಇಂದ್ರಜಿತ್‌ ಲಂಕೇಶ್‌ ಆರೋಪಿಸಿದ್ದರು.
  • ನಟ ದರ್ಶನ್‌ ಹುಟ್ಟುಹಬ್ಬದಂದು ಮನೆಗೆ ಶೂಟಿಂಗ್‌ ಗೆ ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆ, 2012 ರಲ್ಲಿ ಚಿಂಗಾರಿ ನಿರ್ಮಾಕರ ಮಹದೇವ್‌ ಅವರಿಗೆ ಹಲ್ಲೆ ಬೆದರಿಕೆ ಅವಾಚ್ಯ ಶಬ್ದಗಳಿಂದ ನಿಂದನೆ, ಯಜಮಾನ ಸಿನಿಮಾ ಚಿತ್ರೀಕರಣದ ವೇಳೆ ಜ್ಯೂ. ಆರ್ಟಿಸ್ಟ್‌   ಶಿವಶಂಕರ್‌ ಮೇಲೆ ಹಲ್ಲೆ ಮುಂತಾದವು ದರ್ಶನ್‌ ಗೆ ಸಾಕಷ್ಟು ಕುಖ್ಯಾತಿ ನೀಡಿತು.
  • ಇವಿಷ್ಟೇ ಅಲ್ಲದೇ ನಿರ್ಮಾಪಕ ಉಮಾಪತಿ ಜೊತೆಗಿನ ವಿವಾದ, ಮನೆಗೆ ಬಂದಿದ್ದ ಮಾಧ್ಯಮದವರ ಮೇಲೆ ಹಲ್ಲೆ, ನಟ ಜಗ್ಗೇಶ್‌ ಜೊತೆಗೆ ದರ್ಶನ್‌ ಅಭಿಮಾನಿಗಳ ವಿವಾದ, ಮನೆಯಲ್ಲಿ ಪ್ರಾಣಿ ಪಕ್ಷಿಗಳನ್ನು ಅಕ್ರಮವಾಗಿ ಇರಿಸಿಕೊಂಡಿದ್ದ ಆರೋಪ, ಪತ್ನಿಯೊಂದಿಗೆ ಹಾಗೂ ಇತರೆ ನಟಿಯರೊಂದಿಗೆ ಫೋನ್‌ ನಲ್ಲಿ ನಡೆಸಿದ್ದ ಅಶ್ಲೀಲ್‌ ಸಂಭಾಷಣೆಗಳ ರೆಕಾರ್ಡ್‌ ಬಹಿರಂಗ, ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಜೊತೆಗಿನ ವಿವಾದ, ನಿರ್ದೇಶಕ ಪ್ರೇಂ ಬಗ್ಗೆ ಅವಹೇಳನಕಾರಿ ಹೇಳಿಕೆ ಮುಂತಾದವು ದರ್ಶನ್‌  ಹಿಂದಿರುವ ವಿವಾದಗಳ ಪೈಕಿ ಕೆಲವು.

ಹೆಚ್ಚಿನ ಸುದ್ದಿ