Sunday, July 7, 2024
Homeಟಾಪ್ ನ್ಯೂಸ್VIRAL NEWS : ತಾಳಿ ಕಟ್ಟುವ ಶುಭ ವೇಳೆ, ಕೋತಿ ಕೊಡ್ತು ಕೂಳೆ - ಮದುವೆಮನೆಯಲ್ಲಿ...

VIRAL NEWS : ತಾಳಿ ಕಟ್ಟುವ ಶುಭ ವೇಳೆ, ಕೋತಿ ಕೊಡ್ತು ಕೂಳೆ – ಮದುವೆಮನೆಯಲ್ಲಿ ಮಂಗನಾಟ!

ಹಾಸನದಲ್ಲಿ ಮಂಗಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪರಿಣಾಮ ಮಂಗವೊಂದು ಮದುವೆ ಮನೆಗೆ ನುಗ್ಗಿ ಅವಂತರ ಸೃಷ್ಟಿಸಿದಲ್ಲದೇ ನನಗೂ ಮದುವೆ ಮಾಡಿಸಿ ಎಂದು ವರನ ಪಕ್ಕದಲ್ಲಿ ಕೂತಿದೆ. 

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆಯ ಸಭಾರಂಭದಲ್ಲಿ ನಡೆದ ಮದುವೆಯೊಂದಕ್ಕೆ ಮಂಗವೊಂದು ದಿಢೀರ್ ಎಂಟ್ರಿ ಕೊಟ್ಟಿದ್ದು, ಮದುವೆಗೆ ಬಂದಿದ್ದ ಐವರು ಸೇರಿದಂತೆ ಒಟ್ಟು ಎಂಟು ಜನರಿಗೆ ಕಚ್ಚಿ ಗಾಯ ಮಾಡಿದೆ. 

 

 

ಮದುವೆಗೆ ಬಂದಿದ್ದ ಸುಶೀಲಮ್ಮ,ಲೀಲಾವತಿ, ನಿಂಗೇಗೌಡ,ಗೌರಮ್ಮ, ಗಿರಿಜಮ್ಮ ,ತಿಮ್ಮೇಗೌಡ , ಗಿರಿಗೌಡ ಎಂಬುವವರಿಗೆ ಕೋತಿ ಕಚ್ಚಿದ್ದು, ಗಾಯಾಳುಗಳಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಅಷ್ಟೇ ಅಲ್ಲದೆ ತಾಳಿ ಕಟ್ಟುವ ವೇಳೆ ಸೀದಾ ವರನ ಪಕ್ಕದಲ್ಲಿ ಹೋಗಿ ಹಾಯಾಗಿ ಕೂತಿದೆ. ಮಂಗನನ್ನು ಓಡಿಸಲು ಎಷ್ಟೇ ಪ್ರಯತ್ನ ಪಟ್ಟರು ಕೊಂಚ ಕೂಡ ಅಲುಗಾಡಲಿಲ್ಲ. 

ಮದುವೆ ಮುಗಿದ ನಂತರ ಡೈನಿಂಗ್ ಹಾಲ್ ಗೆ ಎಂಟ್ರಿಯಾಗಿ ಊಟ ಮಾಡುತ್ತಿದ್ದವರಿಗು ಸಮಸ್ಯೆ ತಂದೊಡ್ಡಿದ್ದು, ಮದುವೆ ಮನೆಯಲ್ಲಿ ಮಂಗನಾಟಕ್ಕೆ ಜನ ಹೈರಾಣಾಗಿದ್ದಾರೆ. 

ಸುತ್ತಮುತ್ತಲಿನ ಹಳ್ಳಿಯಲ್ಲಿ ಓಡಾಡುತ್ತಿರೊ ಕೋತಿ ಹಿಡಿದು ಸ್ಥಳಾಂತರ ಮಾಡಲು ಅರಣ್ಯ ಇಲಾಖೆಗೆ ಜನರು ಆಗ್ರಹಿಸಿದ್ದು, ಕೋತಿಗಳನ್ನು ಹಿಡಿಯಲು ಇಲಾಖೆಯು ಸಿದ್ಧತೆ ನಡೆಸುತ್ತಿದ್ದಾರೆ. 

 

ಹೆಚ್ಚಿನ ಸುದ್ದಿ