Sunday, July 7, 2024
Homeಕ್ರೈಂCYBER SCAM : ಐಫೋನ್‌ , ಕಾರ್, ಚಿನ್ನದ ಸರ ಫ್ರೀ - ಆಸೆಗೆ ಬಿದ್ದ ಮಹಿಳೆಗೆ...

CYBER SCAM : ಐಫೋನ್‌ , ಕಾರ್, ಚಿನ್ನದ ಸರ ಫ್ರೀ – ಆಸೆಗೆ ಬಿದ್ದ ಮಹಿಳೆಗೆ 53 ಲಕ್ಷ ರೂ. ವಂಚನೆ!

ಲಕ್ಕಿ ಡ್ರಾದಲ್ಲಿ ದುಬಾರಿ ಬಹುಮಾನಗಳು ಸಿಕ್ಕಿದೆ ಅದನ್ನು ಕಳುಹಿಸಲು ಶುಲ್ಕ ನೀಡಬೇಕು ಎಂದು ಹೇಳಿ ಬರೋಬ್ಬರಿ ₹ 53 ಲಕ್ಷ  ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.  

2023 ಜೂನ್‌ನಲ್ಲಿ ವಾಟ್ಸ್ಆಪ್ ಮೂಲಕ ಅಪರಿಚಿತ ವ್ಯತಿಯೊಬ್ಬ ಶಕೂರ್ ಎಂಬುವುದಾಗಿ ಪರಿಚರಿಸಿಕೊಂಡು ‘ಚೋಟಾ ಬಾಯ್ ಬಡಾ ಬಾಯ್ ಝಮ್ ಝಮ್ ಎಲೆಕ್ಟ್ರಾನಿಕ್ಸ್’ ಕಡೆಯಿಂದ ನಿಮಗೆ ಲಕ್ಕಿ ಡ್ರಾದಲ್ಲಿ ಕಾರು, ಐಫೋನ್ ಮತ್ತು ಚಿನ್ನದ ಸರ ಬಹುಮಾನ ಸಿಕ್ಕಿದೆ ಎಂದು ತಿಳಿಸಿದ್ದ ಎನ್ನಲಾಗಿದೆ.  

ಈ ಬಹುಮಾನವನ್ನು ನಿಮ್ಮ ಮನೆಗೆ ಕಳುಹಿಸಬೇಕಾದರೆ ಶುಲ್ಕ ಪಾವತಿಸಬೇಕು ಎಂದು ವಂಚಕ ಹೇಳಿದ್ದಾನೆ. ಇದನ್ನು ನಂಬಿದ ಮಹಿಳೆ ಆರಂಭದಲ್ಲಿ ಜೂನ್ 9 ರಂದು 30,000 ರೂ. ಕಟ್ಟಿದ್ದಾರೆ. 

ಅಲ್ಲದೇ ಮುಂದಿನ ತಿಂಗಳುಗಳಲ್ಲಿ ಹೆಚ್ಚಿನ ಉಡುಗೊರೆಗಳು ಡ್ರಾ ಆಗಲಿದೆ.ಆಗ ಮತ್ತೆ ನಿಮಗೆ ಬಹುಮಾನ ಸಿಗುವ ಚಾನ್ಸ್ ಇದೆ ಎಂದು ಸುಳ್ಳು ಹೇಳಿ ಆಕೆಗೆ ನಿರಂತರವಾಗಿ ಭರವಸೆ ನೀಡಲಾಯಿತು. 

ಇದನ್ನು ನಿಜ ಎಂದು ನಂಬಿದ್ದ ಮಹಿಳೆಯಿಂದ ಜೂನ್ 6, 2023 ರಿಂದ ಮೇ 27, 2024 ರವರೆಗೆ ವಂಚಕರು ವಿವಿಧ ಬ್ಯಾಂಕ್ ಖಾತೆಗಳಿಗೆ ಕಂತಿನ ರೂಪದಲ್ಲಿ  ಒಟ್ಟು 52.9 ಲಕ್ಷ ರೂ ಕಟ್ಟಿಸಿಕೊಂಡಿದ್ದಾನೆ. 

ಹಣ ಕಟ್ಟಿಸಿಕೊಳ್ಳಲು ಶುರು ಮಾಡಿ ಒಂದು ವರ್ಷವಾದರೂ ಗಿಫ್ಟ್ ಬಂದಿಲ್ಲ ಎಂದು ಮತ್ತೆ ವಂಚಕನಿಗೆ ಕರೆ ಮಾಡಿದಾಗ ಇನ್ನೂ ಹೆಚ್ಚಿನ ಹಣ ಕಟ್ಟಲು ಹೇಳಿದ್ದಾನೆ. ಈ ವೇಳೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. 

ತಕ್ಷಣ ಮಹಿಳೆ ತನ್ನ ಮನೆಯವರಿಗೆ ಹಾಗೂ ಸ್ನೇಹಿತರಿಗೆ ಮಾಹಿತಿ ನೀಡಿದ್ದಾಳೆ. ವಂಚಕರು ಉಡುಗೊರೆಗಳನ್ನು ತಲುಪಿಸಿಲ್ಲ ಮತ್ತು ಹಣವನ್ನು ಹಿಂತಿರುಗಿಸದ ಕಾರಣ ಮಂಗಳೂರಿನ ಸೆನ್ ಕ್ರೈಂ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ.  

ಹೆಚ್ಚಿನ ಸುದ್ದಿ