Sunday, July 7, 2024
Homeಟಾಪ್ ನ್ಯೂಸ್Narendra Modi: 10 ಮುಗೀತು.. ಇನ್ನೂ 20 ವರ್ಷ ಬಾಕಿ ಇದೆ : ಕಾಂಗ್ರೆಸ್‌ಗೆ ಮೋದಿ...

Narendra Modi: 10 ಮುಗೀತು.. ಇನ್ನೂ 20 ವರ್ಷ ಬಾಕಿ ಇದೆ : ಕಾಂಗ್ರೆಸ್‌ಗೆ ಮೋದಿ ತಿರುಗೇಟು..!

ನವದೆಹಲಿ: ನಮ್ಮ ಸರ್ಕಾರ ಈಗಾಗಲೇ 10 ವರ್ಷ ಪೂರೈಸಿದೆ. ಇನ್ನೂ 20 ವರ್ಷಗಳು ಉಳಿದಿವೆ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಗಳ ಬಳಿಕವೂ ಇದೇ ಸರ್ಕಾರ ಮುಂದುವರಿಯಲಿದೆ ಎಂಬ ಭವಿಷ್ಯವನ್ನು ಪ್ರಧಾನಿ ನರೇಂದ್ರ ಮೋದಿ ನುಡಿದಿದ್ದಾರೆ.

ಬುಧವಾರ ರಾಜ್ಯಸಭೆಯನ್ನು ಉದ್ದೇಶಿಸಿ ಒಂದು ಗಂಟೆಗೂ ಹೆಚ್ಚು ಕಾಲ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಸಂವಿಧಾನದ ಬಗ್ಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವುದರಿಂದ ಹಿಡಿದು ನೀಟ್ ವಿವಾದ, ಮಣಿಪುರ ಘರ್ಷಣೆಯವರೆಗೆ ಪ್ರಧಾನಿ ದೇಶದ ಹಲವು ಪ್ರಮುಖ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಕಾಂಗ್ರೆಸ್‌ ಬಿಜೆಪಿಯನ್ನು ಮೂರನೇ ಒಂದು ಭಾಗದ ಸರ್ಕಾರ ಎಂದು ಲೇವಡಿ ಮಾಡಿದ್ದಕ್ಕೆ ಪ್ರತಿಕ್ರಿಯಸಿದ ಮೋದಿ, ಕೇಂದ್ರದಲ್ಲಿ ತಮ್ಮ ಸರ್ಕಾರ 10 ವರ್ಷಗಳನ್ನು ಪೂರೈಸಿದೆ ಮತ್ತು ಮುಂದೆ ಕನಿಷ್ಠ 20 ವರ್ಷಗಳ ಕಾಲ ಅಧಿಕಾರದಲ್ಲಿ ಉಳಿಯುತ್ತದೆ ಎಂದರು.

ಕೆಲವರು ನಮ್ಮದು ಮೂರನೇ ಒಂದು ಭಾಗದ ಸರ್ಕಾರ ಎಂದು ಕರೆಯುತ್ತಿದ್ದಾರೆ, ಇದು ನಿಜ. ನಾವು ನಮ್ಮ ಅವಧಿಯ ಮೂರನೇ ಒಂದು ಭಾಗವನ್ನು ಪೂರ್ಣಗೊಳಿಸಿದ್ದೇವೆ ಮತ್ತು ಅದರಲ್ಲಿ ಮೂರನೇ ಎರಡರಷ್ಟು ಉಳಿದಿದೆ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್‌ 20 ವರ್ಷಗಳಲ್ಲಿ ಮಾಡಬಹುದಾಗಿದ್ದ ಕೆಲಸಗಳನ್ನು ನಾವು ಈಶಾನ್ಯ ಭಾರತದಲ್ಲಿ ಕೇವಲ 5 ವರ್ಷಗಳಲ್ಲಿ ಸಾಧಿಸಿದ್ದೇವೆ ಎಂದು ಹೇಳಿದರು.

ಹೆಚ್ಚಿನ ಸುದ್ದಿ