ಬಿಹಾರ: ತಮಿಳುನಾಡಿನಲ್ಲಿ ಬಿಹಾರದ ವಲಸೆ ಕಾರ್ಮಿಕರ ಮೇಲೆ ದಾಳಿ ನಡೆದಿದೆ ಎಂದು ನಕಲಿ ವಿಡಿಯೋ ಮಾಡಿದ್ದ ಯೂಟ್ಯೂಬರ್ ಮನೀಶ್ ಕಶ್ಯಪ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಥವಾ ಎನ್ ಎಸ ಎಡಿ ಪ್ರಕರಣದ ದಾಖಲಿಸಲಾಗಿದೆ.
ಬಂಧನಕ್ಕೆ ಹೆದರಿದ ಮನೀಶ್ ಬಿಹಾರದ ಚಂಪಾರಣ್ಯ ಪೊಲೀಸ್ ಠಾಣೆ ಶರಣಾಗಿದ್ದರು.
ತಮಿಳುನಾಡಿನಲ್ಲಿ ಬಿಹಾರದ ವಲಸೆ ಕಾರ್ಮಿಕರ ಮೇಲೆ ದಾಳಿ ನಡೆದಿದೆ ಎಂದು ಮನೀಶ್ ಮಾಡಿದಂತಹ ವಿಡಿಯೋ ಸಾವಿರಾರು ವೀವ್ಸ್ ಪಡೆದಿತ್ತು. ಆದರೆ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ. ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತನಿಖೆ ಆದೇಶಿಸಿದ್ದು ಆನಂತರದಲ್ಲಿ ತಮಿಳುನಾಡು ಮತ್ತು ಬಿಹಾರ ಪೊಲೀಸರು ಮನೀಶ್ ಗಾಗಿ ಬಲೆ ಬೀಸಿದ್ದರು.
ಈ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಇಂತಹ ಯಾವುದೇ ದಾಳಿಗಳು ನಡೆದಿಲ್ಲ ಎಂದಿದ್ದರು. ಬಳಿಕ ತಮಿಳುನಾಡು ಪೊಲೀಸರು ಪ್ರತಿಕ್ರಿಯಿಸಿ ಇದೊಂದು ನಕಲಿ ವಿಡಿಯೋ ಎಂದಿದ್ದರು.