ನವದೆಹಲಿ: ಯುವ ಕಾಂಗ್ರೆಸ್ ಅಧ್ಯಕ್ಷ್ಯ ಬಿ.ವಿ.ಶ್ರೀನಿವಾಸ್‌ರನ್ನು ದೆಹಲಿ ಪೋಲೀಸರು ಬಂಧಿಸಿದ್ದಾರೆ. ರಾಹುಲ್ ಗಾಂಧಿ ಅನರ್ಹತೆಯನ್ನು ಖಂಡಿಸಿ ಬಿ.ವಿ.ಶ್ರೀನಿವಾಸ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ದೆಹಲಿಯ ಕೆಂಪುಕೋಟೆ ಎದುರು ಮಶಾಲ್ ಮಾರ್ಚ್ ಹಮ್ಮಿಕೊಂಡಿದ್ರು..
ಲೋಕತಂತ್ರ ಉಳಿಸಿ ಎಂಬ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಕೆಂಪುಕೋಟೆಯಿಂದ ದೆಹಲಿ ಟೌನ್ ಹಾಲ್ ವರೆಗಿನ ಮೆರವಣಿಗೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದರು. ಆದರೂ ಪ್ರತಿಭಟನಾ ಮೆರವಣಿಗೆ ಕೈಗೊಂಡ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಬಲಾತ್ಕಾರಯುತವಾಗಿ ತಮ್ಮನ್ನು ಹೊತ್ತೂಯ್ಯುತ್ತಿರುವ ಹಾಗೂ ಪ್ರತಿಭಟನೆಗೆ ಅಡ್ಡಿ ಪಡಿಸುತ್ತಿರುವ ದೃಶ್ಯಾವಳಿಗಳನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿರುವ ಬಿ.ವಿ.ಶ್ರೀನಿವಾಸ್, ಸ್ವಾತಂತ್ರ ಭಾರತದಲ್ಲಿ ನಾವು ಪ್ರತಿಭಟಿಸಲೂ ಅವಕಾಶವಿಲ್ಲ.. ಲೋಕಸಭೆಯಲ್ಲಿ ಪ್ರಶಿಸುವಂತೆಯೂ ಇಲ್ಲ. ಇದು ಯಾವ ರೀತಿ ಸರ್ವಾಧಿಕಾರಿ ಆಡಳಿತ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ .
ಈ ದೇಶದಲ್ಲಿ ಯಾವುದರ ವಿರುದ್ಧವೂ ದನಿಯೆತ್ತಲು ಸಾಧ್ಯವಿಲ್ಲವೆಂದಾದರೆ ಪ್ರಜಾಪ್ರಭುತ್ವ ಎಲ್ಲಿದೆ ? ಎಂದು ಶ್ರೀನಿವಾಸ್ ಸರಣಿ ಟ್ವೀಟ್ ಮೂಲಕ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ