ಕಲಬುರಗಿ: ಕಿಡಿಗೇಡಿ ಯುವಕನೊಬ್ಬನ ಕಿರುಕುಳ (Harassment) ತಾಳಲಾರದೇ ಯುವತಿಯೋರ್ವಳು ಆತ್ಮಹತ್ಯೆಗೆ (Self harm) ಶರಣಾಗಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ. ಭೂಷಣಗಿ ಗ್ರಾಮದ ಸಾಕ್ಷಿ (22) ಮೃತ ದುರ್ದೈವಿ.
ರಾಜನಾಳದ ಗ್ರಾಮದ ಅಭಿಷೇಕ್ ಎಂಬಾತ ತನ್ನನ್ನು ಪ್ರೀತಿಸುವಂತೆ ಸಾಕ್ಷಿಯನ್ನು ಪೀಡಿಸುತ್ತದ್ದ. ಈಕೆ ಒಪ್ಪದಿದ್ದಾಗ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಅಷ್ಟೇ ಅಲ್ಲದೇ ಆಕೆಯ ಪೊಟೋಗಳನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದ. ಇದರಿಂದ ಘಾಸಿಗೊಂಡ ಸಾಕ್ಷಿ ಕಮಲಾಪುರದ ಕುರಿಕೋಟದ ಬಳಿ ಬೆಣ್ಣೆತೋರಾ ಡ್ಯಾಂ ಗೆ ಹಾರಿ ಪ್ರಾಣಬಿಟ್ಟಿದ್ದಾಳೆ.
ಇದನ್ನೂ ಓದಿ : ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣು -ಕಾರಣ ಮಾತ್ರ ನಿಗೂಢ!
ಪೋಷಕರು ಈ ಕುರಿತು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಒಂದೆಡೆ ಸಾಕ್ಷಿ ಶವಕ್ಕಾಗಿ ಪತ್ತೆಕಾರ್ಯ ಆರಂಭಿಸಿದ್ದು, ಮತ್ತೊಂದೆಡೆ ಅಭಿಷೇಕ್ ನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಪ್ರತ್ಯೇಕ ಪ್ರಕರಣದಲ್ಲಿ ದೃಶ್ಯಂ (Drushyam) ಚಿತ್ರ ಯಾರಿಗೆ ತಾನೇ ನೆನಪಿಲ್ಲ ಹೇಳಿ.. ಹೀರೋ ತನ್ನ ಕುಟುಂಬಕ್ಕಾಗಿ ಮಾಡುವ ಕೆಲಸ ಎಂತವರನ್ನು ಕೂಡ ಒಂದು ಕ್ಷಣ ನಡುಗಿಸಿ ಬಿಡುತ್ತೆ.. ಆದರೆ ಇದೇ ರೀತಿಯ ಪ್ರಕರಣವೊಂದು ಮಹಾರಾಷ್ಟ್ರ (Maharashtra)ದಲ್ಲಿ ನಡೆದಿದ್ದು, ಲವರ್ ಜೊತೆ ಸೇರಿ ಪತ್ನಿಯೊಬ್ಬಳು ತನ್ನ ಪತಿಯನ್ನೇ ಕೊಂದು ಟೈಲ್ಸ್ ಅಡಿ ಹೂತು ಹಾಕಿರುವ ಘಟನೆ ನಡೆದಿದೆ.
ಮೃತ ದುರ್ದೈವಿಯನ್ನು 35 ವರ್ಷದ ವಿಜಯ್ ಚವಾಣ್ ಎಂದು ಗುರುತಿಸಲಾಗಿದೆ. ವಿಜಯ್ ಹಾಗೂ ಆರೋಪಿ ಕೋಮಲಾ (28) ಎಂಬುವವರು ಕಳೆದ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು.. ಮದುವೆಯ ಬಳಿಕ ದಂಪತಿಗಳು ಮುಂಬೈನಿಂದ ಸುಮಾರು 70 ಕಿಮೀ ದೂರದಲ್ಲಿರುವ ನಲಸೋಪರ ಪೂರ್ವದ ಗಡ್ಗಪದ ಎಂಬಲ್ಲಿ ವಾಸವಿದ್ದರು.
ಹೀಗೆ ಮದುವೆಯಾಗಿ ಕೆಲ ವರ್ಷಗಳು ಕಳೆಯುತ್ತಿದ್ದಂತೆ ಕೋಮಲಾಗೆ ಪಕ್ಕದ ಮನೆಯ ಮೋನು ಶರ್ಮಾ (20) ಎಂಬಾತನ ಪರಿಚಯವಾಗುತ್ತದೆ. ಬಳಿಕ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿತ್ತು. ಮನೆಯಲ್ಲಿ ಪತಿ ಇಲ್ಲದಿದ್ದಾಗ ಪತ್ನಿ ಕೋಮಲಾ ತನ್ನ ಪ್ರಿಯಕರ ಮೋನು ಅನ್ನು ಕರೆಸಿಕೊಳ್ಳುತ್ತಿದ್ದಳು.
ಕಾಲಕ್ರಮೇಣ ಪತ್ನಿ ಕೋಮಲಾಳ ವರ್ತನೆ ಬದಲಾಗುತ್ತಿದ್ದಂತೆ ಮೃತ ಪತಿಗೆ ಅನುಮಾನಗೊಂಡು ಕೆಲಸಕ್ಕೆ ಹೋಗುವಂತೆ ಹೇಳಿ ಹೋಗಿ ಕದ್ದು ಆಕೆಯ ನಡವಳಿಕೆಯನ್ನು ಪರಿಶೀಲಿಸಿದ್ದಾನೆ. ಈ ವೇಳೆ ಆಕೆಗೆ ಪಕ್ಕದ ಮನೆಯ ಯುವಕನೊಂದಿಗೆ ಅಕ್ರಮ ಸಂಬಂಧವಿರುವುದು ಪತ್ತೆಯಾಗುತ್ತದೆ.
ಈ ಬಗ್ಗೆ ಇಬ್ಬರ ನಡುವೆ ಗಲಾಟೆ ಕೂಡ ಆಗುತ್ತದೆ.. ಆದರೆ ಇತ್ತ ಕೋಮಲಾಗೆ ಮೋನು ಬಿಟ್ಟು ಇರಲು ಸಾದ್ಯವಾಗದ ಹಿನ್ನಲೆ ಆತನನ್ನೇ ಮುಗಿಸಲು ಪ್ಲಾನ್ ಮಾಡಿದ್ದಾಳೆ. ಈ ಬಗ್ಗೆ ತನ್ನ ಪ್ರಿಯಕರನಿಗೆ ಕೂಡ ಹೇಳಿದಾಗ ಆತ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾನೆ.
ಅದರಂತೆ ಇಬ್ಬರ ಕೂಡ ಸೇರಿ ವಿಜಯ್ ನನ್ನು ಕೊಲೆ ಮಾಡಿದ್ದಾರೆ. ಬಳಿಕ ಏನು ಮಾಡಬೇಕು ಎಂದು ಗೊತ್ತಾಗದೆ ಮನೆಯಲ್ಲಿ ಟೈಲ್ಸ್ ಕಿತ್ತು ಅದರ ಅಡಿಯಲ್ಲಿ ಹೂತು ಹಾಕಿದ್ದಾರೆ. ಅಷ್ಟೇ ಅಲ್ಲದೆ ತಮಗೆ ಏನು ಗೊತ್ತೇ ಇಲ್ಲದಂತೆ ನಾಟಕವಾಡಿದ್ದಾರೆ.
ಇತ್ತ ವಿಜಯ್ ನಾಪತ್ತೆಯಾಗಿದ್ದಾರೆ ಎಂದು ಆತನ ಸಹೋದರ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಅದರಲ್ಲೂ ಎಲ್ಲೂ ಪತ್ತೆಯಾಗಿರಲ್ಲಿಲ್ಲ.. ಹೀಗೆ ಒಂದು ದಿನ ಸಹೋದರನನ್ನು ಹುಡುಕಿಕೊಂಡು ಮನೆಗೆ ಬಂದಾಗ ಮನೆಯಲ್ಲಿ ಏನೋ ಬದಲಾವಣೆ ಕಂಡು ಬಂದಿದೆ.
ಹೀಗೆ ಮನೆಯನ್ನು ಗಮನಿಸಿದಾಗ ಟೈಲ್ಸ್ ಗಳ ಬಣ್ಣಗಳು ಒಂದಕ್ಕೊಂದು ಹೋಲಿಕೆಯಾಗುತ್ತಿರಲಿಲ್ಲ.. ಅಲ್ಲದೇ ಟೈಲ್ಸ್ ಅನ್ನು ಒಮ್ಮೆ ತೆಗೆದು ಮತ್ತೆ ಹಾಕಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.. ಇದರಿಂದ ಅನುಮಾನಗೊಂಡ ವಿಜಯ್ ಸಹೋದರ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು ವಿಜಯ್ ಮನೆಗೆ ಬಂದು ಟೈಲ್ಸ್ ಅನ್ನು ತೆಗೆದಿದ್ದಾರೆ. ಈ ವೇಳೆ ಕೆಟ್ಟ ವಾಸನೆ ಬರುವುದನ್ನು ಗಮನಿಸಿ ಇನ್ನಷ್ಟು ಓಪನ್ ಮಾಡಿದಾಗ ವಿಜಯ್ ಮೃತದೇಹ ಪತ್ತೆಯಾಗಿದೆ.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆರೋಪಿಗಳಾದ ಪತ್ನಿ ಕೋಮಲಾ ಹಾಗೂ ಪ್ರಿಯಕರ ಮೋನು ಶರ್ಮಾನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.