Saturday, January 25, 2025
Homeಟಾಪ್ ನ್ಯೂಸ್ಯಶ್‌ ಮನೆಗೂ ರಾಜಕೀಯ ಆಫರ್:‌ ಏನಂದ್ರು ರಾಕಿಂಗ್‌ ಸ್ಟಾರ್?

ಯಶ್‌ ಮನೆಗೂ ರಾಜಕೀಯ ಆಫರ್:‌ ಏನಂದ್ರು ರಾಕಿಂಗ್‌ ಸ್ಟಾರ್?

ಸುದೀಪ್‌ ಬಿಜೆಪಿ ಪರ ಪ್ರಚಾರಕ್ಕೆ ಇಳಿಯುವುದಾಗಿ ಘೋಷಿಸುತ್ತಿದ್ದಂತೆ ಕನ್ನಡದ ಇತರ ನಟರಿಗೂ ರಾಜಕೀಯ ಪಕ್ಷಗಳಿಂದ ಆಫರ್‌ ಗಳು ಹೋಗ ತೊಡಗಿವೆ. ಮೂಲಗಳ ಪ್ರಕಾರ ಯಶ್‌ ಮನೆ ಬಾಗಿಲಿಗೂ ಬಿಜೆಪಿ ನಾಯಕರು ಹೋಗಿದ್ದು, ಪ್ರಚಾರಕ್ಕೆ ಬರುವಂತೆ ಕೇಳಿಕೊಂಡಿದ್ದಾರೆ.

ಸುಮಲತಾ ಅಂಬರೀಶ್‌ ಪರ ಭರದ ಪ್ರಚಾರ ನಡೆಸಿದ್ದ ರಾಕಿಂಗ್‌ ಸ್ಟಾರ್‌ ಯಶ್‌ ಕೆಜಿಎಫ್‌ ಮೂಲಕ ತಮ್ಮ ಪ್ರಭಾವವನ್ನು ಇನ್ನಷ್ಟು ವಿಸ್ತರಿಸಿಕೊಂಡಿದ್ದು, ಇದರ ಫಲವನ್ನು ಕೊಯ್ಲು ಮಾಡಲು ಬಿಜೆಪಿ ನಾಯಕರು ಯೋಚಿಸಿದ್ದರು.

ಆದರೆ, ಯಶ್‌ ನಗುಮುಖದಿಂದ ಬಿಜೆಪಿ ನಾಯಕರನ್ನು ಮರಳಿ ಕಳಿಸಿದ್ದಾರೆ ಎನ್ನಲಾಗಿದೆ. ಈ ಬಾರಿ ಯಾವುದೇ ಕಾರಣಕ್ಕೂ ಯಾರದ್ದೇ ಪರ ಚುನಾವಣಾ ಪ್ರಚಾರಕ್ಕೆ ಇಳಿಯುವುದಿಲ್ಲ ಎಂದು ಯಶ್‌ ನಿರ್ಧರಿಸಿದ್ದು, ತಮ್ಮ ಸಮಯವನ್ನು ಮುಂದಿನ ಸಿನೆಮಾಗಾಗಿ ಮೀಸಲಿಟ್ಟಿದ್ದಾರೆ ಎನ್ನಲಾಗಿದೆ.

ಹಳೆ ಮೈಸೂರು ಭಾಗದಲ್ಲಿ ತುಸು ಹೆಚ್ಚೇ ಅಭಿಮಾನಿ ವರ್ಗ ಹೊಂದಿರುವ ಯಶ್‌ ಈ ಬಾರಿ ಚುನಾವಣಾ ಪ್ರಚಾರಕ್ಕೆ ಇಳಿದರೆ ಗಮನಾರ್ಹ ಪ್ರಮಾಣದ ಮತ ಅದಲು ಬದಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಇದ್ಯಾವುದರ ಕಡೆಗೂ ಗಮನ ಹರಿಸಲು ಯಶ್‌ ಹೋಗದೆ, ಮುಂದಿನ ಸಿನೆಮಾಗಾಗಿ ಸಂಪೂರ್ಣ ಸಮಯ ವಿನಿಯೋಗಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಹೆಚ್ಚಿನ ಸುದ್ದಿ

error: Content is protected !!