ರಾಕಿಂಗ್ ಸ್ಟಾರ್ ಯಶ್ (Yash) ಅವರು ಶಂಕರ್ ನಾಗ್ ಅವರ ಗೀತಾಂಜಲಿ ಹಾಡನ್ನು ಹಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಹೌದು.. ಯಶ್ ಅವರು ಶಂಕರ್ ನಾಗ್ ಅವರ ದೊಡ್ಡ ಅಭಿಮಾನಿ ಎಂಬುದು ಹಲವು ಬಾರಿ ಸಾಬೀತಾಗಿದೆ. ಗೂಗ್ಲಿ ಸಿನಿಮಾದಲ್ಲಿ ಯಶ್ ಅವರು ಶಂಕರ್ ನಾಗ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದೇ ಇದಕ್ಕೆ ಉದಾಹರಣೆ. ಇದೀಗ ಪಾರ್ಟಿಯೊಂದರಲ್ಲಿ ಯಶ್ ಅವರು ಶಂಕರ್ ನಾಗ್ ಅಭಿನಯದ ಸಿನಿಮಾದ ಹಾಡೊಂದನ್ನು ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಗಮನ ಸೆಳೆದಿದೆ. ಈ ವಿಡಿಯೋ ಮೂಲಕ ಅವರ ಕನ್ನಡದ ಮೇಲಿನ ಪ್ರೀತಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇದು ಯಶ್ ಅವರ ಬರ್ತ್‌ಡೇ ಪಾರ್ಟಿಯ ಸಂದರ್ಭದ ವಿಡಿಯೋವೇ ಎಂಬುದು ಇನ್ನೂ ದೃಢಪಟ್ಟಿಲ್ಲ.
ಶಂಕರ್ ನಾಗ್ ಹಾಡು ಹಾಡಿದ ರಾಕಿಭಾಯ್#bollywood #rockybhai #yash #kannadasongs #videoviral #KannadaNews #navasamajanews pic.twitter.com/f2eDDdfi4y
— navasamaja (@navasamajanews) January 9, 2026
ನಿನ್ನೆ ಯಶ್ ಅವರ ಜನ್ಮದಿನವಾಗಿತ್ತು. ಈ ವೇಳೆಯ ವಿಡಿಯೋ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗುತ್ತಿದೆ.ಸದ್ಯ ವಿಡಿಯೋದ ಒಂದು ಕ್ಲಿಪ್ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಯಶ್ ಅವರು ಶಂಕರ್ ನಾಗ್ ಅಭಿನಯದ ಸಿಬಿಐ ಶಂಕರ್ ಚಿತ್ರದ ಗೀತಾಂಜಲಿ ಹಾಡನ್ನು ಹಾಡುತ್ತಿರುದನ್ನು ನೋಡಬಹುದಾಗಿದೆ. ಈ ದೃಶ್ಯಗಳು ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ಆದರೆ ಇದು ಹಳೆಯ ವಿಡಿಯೋ ಎನ್ನಲಾಗುತ್ತಿದೆ.
ಸದ್ಯ ಯಶ್ ಅವರು ಮುಂಬೈನಲ್ಲಿದ್ದು, ಇತ್ತೀಚೆಗೆ ತಮ್ಮ ಗೆಟಪ್ ಬದಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಮುಖ ಮತ್ತು ತಲೆಯನ್ನು ಮುಚ್ಚಿಕೊಂಡು ಓಡಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ವೈರಲ್ ಆಗಿರುವ ಈ ವಿಡಿಯೋದಲ್ಲಿ ಅವರು ಹಳೆಯ ಗೆಟಪ್‌ನಲ್ಲೇ ಕಾಣಿಸಿಕೊಂಡಿದ್ದಾರೆ.
ಯಶ್ ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ಕನ್ನಡದ ಮೇಲಿನ ಪ್ರೀತಿಯನ್ನು ಯಾವತ್ತೂ ಕಡಿಮೆ ಮಾಡಿಲ್ಲ. ಪರಭಾಷೆಯಲ್ಲಿ ಹೆಚ್ಚಾಗಿ ನಟಿಸುವುದಕ್ಕಿಂತ, ಪರಭಾಷೆಯ ಕಲಾವಿದರು ಮತ್ತು ತಂತ್ರಜ್ಞರನ್ನು ಕನ್ನಡ ಚಿತ್ರರಂಗಕ್ಕೆ ಕರೆತರುವ ಆಲೋಚನೆ ಅವರಿಗೆ ಸದಾ ಇತ್ತು. ಇದಕ್ಕೆ ‘ಟಾಕ್ಸಿಕ್’ ಸಿನಿಮಾ ಉತ್ತಮ ಉದಾಹರಣೆ. ಈ ಚಿತ್ರಕ್ಕಾಗಿ ಯಶ್ ಅವರು ಪರಭಾಷೆಯ ಕಲಾವಿದರು ಮತ್ತು ತಂತ್ರಜ್ಞರನ್ನು ಕರೆಸಿಕೊಂಡಿದ್ದು, ಹಾಲಿವುಡ್ ತಂತ್ರಜ್ಞರೂ ಸಹ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: “ಗೌರಮ್ಮ..ಬಾರಮ್ಮ..” ಟಾಕ್ಸಿಕ್ ಟೀಸರ್ ರಿಲೀಸ್ ಬೆನ್ನಲ್ಲೇ ಯಶ್ ಹಳೆ ವಿಡಿಯೋ ವೈರಲ್