Saturday, May 16, 2026
Homeಟಾಪ್ ನ್ಯೂಸ್YASH: ರಾಮಾಯಣ ಸಿನಿಮಾದಲ್ಲಿ 15 ನಿಮಿಷ ಮಾತ್ರ ಕಾಣಿಸಲಿದ್ದಾರಂತೆ ಯಶ್‌, ಏನಿದು ಹೊಸ ಸುದ್ದಿ?

YASH: ರಾಮಾಯಣ ಸಿನಿಮಾದಲ್ಲಿ 15 ನಿಮಿಷ ಮಾತ್ರ ಕಾಣಿಸಲಿದ್ದಾರಂತೆ ಯಶ್‌, ಏನಿದು ಹೊಸ ಸುದ್ದಿ?

ಬೆಂಗಳೂರು: ಬಹುನಿರೀಕ್ಷಿತ ರಾಮಾಯಣ (Ramayana) ಸಿನಿಮಾದ (Film) ಮೊದಲ ಭಾಗದ ಟೀಸರ್‌ ಇತ್ತೀಚಗೆಷ್ಟೇ ಬಿಡುಗಡೆಯಾಗಿ, ಅದ್ಭುತ ರೆಸ್ಪಾನ್ಸ್‌ ಪಡೆದುಕೊಂಡಿದೆ. ಇದೀಗ ಈ ಸಿನಿಮಾ ಸಂಬಂಧಿಸಿದಂತೆ ಹೊಸ ಅಪ್ಡೇಟ್‌ ಬಂದಿದ್ದು, ಯಶ್‌ (Yash) ಪಾತ್ರದ ಬಗ್ಗೆ ಗುಸುಗುಸು ಶುರುವಾಗಿದೆ.

 15 ನಿಮಿಷ ಮಾತ್ರ ತೆರೆಮೇಲೆ ಕಾಣಿಸೋದು
ಸದ್ಯದ ಮಾಹಿತಿಗಳ ಪ್ರಕಾರ ಯಶ್‌ ಈ ಸಿನಿಮಾದಲ್ಲಿ ಕೇವಲ 15 ನಿಮಿಷಗಳ ಕಾಲ ಮಾತ್ರ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದು ಕೇವಲ ಮೊದಲ ಭಾಗದಲ್ಲಿ, ಉಳಿದ ಭಾಗಗಳಲ್ಲಿ ಅವರು ಹೆಚ್ಚಾಗಿಯೇ ಕಾಣಿಸಿಕೊಳ್ಳಲಿದ್ದಾರೆ. ಈ ಮೊದಲು ಸಹ ಸಿನಿಮಾ ಬಗ್ಗೆ ಮಾತನಾಡಿದ ಯಶ್‌, ನಾನು ರಾವಣನ ಪಾತ್ರ ಬಿಟ್ಟು ಬೇರೆ ಪಾತ್ರವನ್ನ ಆಯ್ಕೆ ಮಾಡುತ್ತಿರಲಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಅಲ್ಲದೇ, ಈ ಪಾತ್ರದ ಬಗ್ಗೆ ಅವರಿಗೆ ನಿರೀಕ್ಷೆ ಹಾಗೂ ಉತ್ಸಾಹ ಬಹಳಷ್ಟಿದೆ. ಆದರೆ ಮೊದಲ ಭಾಗದಲ್ಲಿ ಕೇವಲ 15 ನಿಮಿಷ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಬೇಸರ ತರಿಸುವ ಸುದ್ದಿಯಾಗಿದೆ.

ನಿರ್ಮಾಣ ಸಹ ಮಾಡುತ್ತಿರುವ ಯಶ್‌
ಇನ್ನೊಂದು ಮುಖ್ಯವಾದ ವಿಚಾರ ಎಂದರೆ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿರುವವರಲ್ಲಿ ಯಶ್‌ ಸಹ ಒಬ್ಬರು. ಆದರೂ ಸಹ ಅವರು ಸಿನಿಮಾಗೆ ಎಷ್ಟು ಬೇಕೋ ಅಷ್ಟೇ ನಿಮಿಷ ಕಾಣಿಸಿಕೊಳ್ಳುತ್ತಿದ್ದು, ಅದರ ಚಿತ್ರೀಕರಣ ಸಹ ಆಗಿದೆ. ಹಾಗೆಯೇ, ರಾಮಾಯಣ ಸಿನಿಮಾದ ಎರಡನೇ ಭಾಗದಲ್ಲಿ ಯಶ್‌ ಅವರ ಪಾತ್ರವೇ ಹೆಚ್ಚಾಗಿ ಕಾಣಿಸಿಕೊಳ್ಳಲಿದೆ. ಚಿತ್ರದ ತುಂಬಾ ಅವರೇ ಇರಲಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಯಶ್‌ ಅವರನ್ನ ರಾವಣನ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, 2026 ದೀಪಾವಳಿ ಸಮಯದಲ್ಲಿ ಮೊದಲ ಭಾಗ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!