Thursday, March 12, 2026
Homeಟಾಪ್ ನ್ಯೂಸ್BIG NEWS: ಅಶ್ಲೀಲ ಫೋಟೋ & ವಿಡಿಯೋಗಳಿಗೆ ಕಂಪ್ಲೀಟ್ ಬ್ರೇಕ್, ‘ಎಕ್ಸ್’ಗೆ ಕಡಿವಾಣ ಹಾಕಿದ ಭಾರತ...

BIG NEWS: ಅಶ್ಲೀಲ ಫೋಟೋ & ವಿಡಿಯೋಗಳಿಗೆ ಕಂಪ್ಲೀಟ್ ಬ್ರೇಕ್, ‘ಎಕ್ಸ್’ಗೆ ಕಡಿವಾಣ ಹಾಕಿದ ಭಾರತ ಸರ್ಕಾರ

ನವದೆಹಲಿ: ಭಾರತದಲ್ಲಿ (India) ಡಿಜಿಟಲ್ ನಿಯಮಾವಳಿಗಳನ್ನು ಪಾಲಿಸುವ ದಿಕ್ಕಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಭಾರತದ ಐಟಿ ಕಾನೂನುಗಳಿಗೆ (IT Law) ಅನುಗುಣವಾಗಿ, ಸಾಮಾಜಿಕ ಜಾಲತಾಣ ‘X’ ದೇಶೀಯ ಬಳಕೆದಾರರಿಗೆ ಅಶ್ಲೀಲ ಹಾಗೂ ಲೈಂಗಿಕ ವಿಷಯಗಳ (Sexual content) ವೀಕ್ಷಣೆಯನ್ನು ನಿರ್ಬಂಧಿಸಿದೆ.

ಮಾರ್ಚ್ 3, 2026ರಿಂದ ಜಾರಿಯಾದ ಜಿಯೋ-ಬ್ಲಾಕಿಂಗ್ ಕ್ರಮವು ದೇಶದ ಅಂತರ್ಜಾಲ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ. ಕೆಲವು ಹ್ಯಾಶ್‌ಟ್ಯಾಗ್‌ಗಳು ಅಥವಾ ಖಾತೆಗಳನ್ನು ಹುಡುಕುವಾಗ, “ಸ್ಥಳೀಯ ಕಾನೂನುಗಳ ಕಾರಣದಿಂದ ಈ ವಿಷಯ ನಿರ್ಬಂಧಿಸಲಾಗಿದೆ” ಎಂಬ ಸಂದೇಶ ಕಾಣಿಸುತ್ತಿದೆ. ಎಲೋನ್ ಮಸ್ಕ್ ಅವರ ‘ಗ್ರೋಕ್’ ಚಾಟ್‌ಬಾಟ್ ಕೂಡ, ಈ ಕ್ರಮ ಸರ್ಕಾರದ ಮಾರ್ಗಸೂಚಿಗಳ ಪಾಲನೆಗಾಗಿ ಎಂದಿದೆ.

ಇದನ್ನೂ ಓದಿ : ಹುಳಗಳನ್ನು ತಿನ್ನುತ್ತಾರಂತೆ ನಟಿ ಪ್ರಿಯಾಂಕಾ ಚೋಪ್ರಾ..!

ಜನವರಿಯಲ್ಲಿ ‘ಗ್ರೋಕ್ AI’ ಮೂಲಕ ನಿರ್ಮಿತ ನಗ್ನ ಚಿತ್ರಗಳ ಬಗ್ಗೆ ದೂರುಗಳು ಕೇಳಿಬಂದಿದ್ದವು.ಹೀಗಾಗಿ ಇದನ್ನು ತೆಗೆದುಹಾಕಲು ಮತ್ತು ಇನ್ಮುಂದೆ ಹೀಗಾಗದಂತೆ ನಿಯಂತ್ರಿಸಲು ಸೂಚಿಸಿದ್ದ ಕೇಂದ್ರ ಸರ್ಕಾರ 72 ಗಂಟೆಗಳ ಗಡುವು ನೀಡಿತ್ತು.

ಹೀಗಾಗಿ ಸೇಫ್ ಹಾರ್ಬರ್ ರಕ್ಷಣೆಯನ್ನು ರದ್ದುಪಡಿಸುವ ಎಚ್ಚರಿಕೆಯ ಬಳಿಕ, ಸಂಸ್ಥೆ ಈ ಬಗ್ಗೆ ಸಹಕಾರ ನೀಡುವುದಾಗಿ ತಿಳಿಸಿದೆ. 600ಕ್ಕೂ ಹೆಚ್ಚು ಖಾತೆಗಳು ಅಮಾನತು ಆಗಿದ್ದು, 3,500ಕ್ಕೂ ಹೆಚ್ಚು ಪೋಸ್ಟ್‌ಗಳು ಭಾರತದಲ್ಲಿ ತಡೆಗಟ್ಟಲ್ಪಟ್ಟಿವೆ. ಈ ನಿರ್ಬಂಧವು ಭಾರತೀಯ ಐಪಿ ವಿಳಾಸಗಳಿಗೆ ಮಾತ್ರ ಅನ್ವಯಿಸುತ್ತದೆ.

ಹೆಚ್ಚಿನ ಸುದ್ದಿ

Change Language »
error: Content is protected !!