ರಷ್ಯಾ: ಕ್ರಂಬ್ಸ್ ಎನ್ನುವ ವಿಶ್ವದ ಅತ್ಯಂತ ದಪ್ಪವಾದ ಬೆಕ್ಕು ತೂಕ ಕಡಿಮೆ ಮಾಡುವ ಶಿಬಿರಕ್ಕೆ ದಾಖಲಾದ ಕೆಲವೇ ವಾರಗಳ ನಂತರ ಮೃತಪಟ್ಟ ಘಟನೆ ರಷ್ಯಾದಲ್ಲಿ ನಡೆದಿದೆ.
ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡಲು ಕ್ರಂಬ್ಸ್ ಅನ್ನು ರಷ್ಯಾದ ಪೆರ್ಮ್‌ನಲ್ಲಿರುವ ಪಶುವೈದ್ಯಕೀಯ ತೂಕ ನಷ್ಟ ಕೇಂದ್ರದಲ್ಲಿ ವಿಶೇಷ ಆರೈಕೆಯಲ್ಲಿ ಇರಿಸಲಾಗಿತ್ತು. ಆದರೆ ಕ್ರಂಬ್ಸ್ ಅಸ್ವಸ್ಥಗೊಂಡಿದ್ದು, ಕೆಲವು ಗಂಟೆಗಳ ನಂತರ ಮೃತಪಟ್ಟಿದೆ.
ಈ ಬಗ್ಗೆ ಪಶು ವೈದ್ಯರು ಮಾಹಿತಿ ನೀಡಿದ್ದು, ಕ್ರಂಬ್ಸ್‌ನ ಕೊಬ್ಬಿನ ಪದರಗಳು ತುಂಬಾ ದಪ್ಪವಾಗಿತ್ತು. ಇದರಿಂದಾಗಿ ಆತನಿಗೆ ಮೆಟಾಸ್ಟೇಸ್‌ಗಳಿವೆ ಎಂದು ತಿಳಿಯಲು ವಿಫಲವಾಗಿದೆ ಎಂದು ಶಂಕಿಸಲಾಗಿದೆ.
ಪ್ರಾಣಿ ರಕ್ಷಕರು ಮೊದಲು ಪೆರ್ಮ್‌ನ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ವಾಸಿಸುತ್ತಿದ್ದ ಕ್ರಂಬ್ಸ್ ಅನ್ನು ಪತ್ತೆ ಮಾಡಿದರು. ಅದಾದ ಬಳಿಕ ಕ್ರಂಬ್ಸ್‌ಗೆ ಬಿಸ್ಕತ್ತುಗಳು ಮತ್ತು ಸೂಪ್‌ನ ನೀಡಿದ್ದರು. ಆದರೆ ಕ್ರಂಬ್ಸ್ ತುಂಬಾ ದಪ್ಪವಿದ್ದರಿಂದ ಅದಕ್ಕೆ ನಡೆದಾಡಲು ತುಂಬಾ ಕಷ್ಟವಾಗುತ್ತಿತ್ತು. ಹೀಗಾಗಿ ಚಿಕಿತ್ಸೆಗಾಗಿ ವಿಶೇಷ ತೂಕ ನಷ್ಟ ಕೇಂದ್ರಕ್ಕೆ ಸೇರಿಸಲಾಯಿತು.