Thursday, March 12, 2026
Homeಟಾಪ್ ನ್ಯೂಸ್BIG NEWS: ಯುವಕರಲ್ಲಿ ಹೆಚ್ಚಾದ ಮಾನಸಿಕ ಅನಾರೋಗ್ಯ! ಕಾರಣ ಹೇಳಿದ ಗ್ಲೋಬಲ್ ಮೈಂಡ್ ಹೆಲ್ತ್ ವರದಿ

BIG NEWS: ಯುವಕರಲ್ಲಿ ಹೆಚ್ಚಾದ ಮಾನಸಿಕ ಅನಾರೋಗ್ಯ! ಕಾರಣ ಹೇಳಿದ ಗ್ಲೋಬಲ್ ಮೈಂಡ್ ಹೆಲ್ತ್ ವರದಿ

ನವದೆಹಲಿ : ಇತ್ತೀಚೆಗೆ ಯುವಕರಲ್ಲಿ ಮಾನಸಿಕ ಅನಾರೋಗ್ಯ (Mental health) ಹೆಚ್ಚಾಗುತ್ತಿದೆ. ಅದೇ ಕಾರಣಕ್ಕೆ ಪ್ರತೀ ವರ್ಷ ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನ (World mental health day) ಎಂದು ವಿಶ್ವದಾದ್ಯಂತ ಆಚರಿಸಿ ಜನರಲ್ಲಿ ಮಾನಸಿಕ ಆರೋಗ್ಯದ ಅನಿವಾರ್ಯತೆ ಬಗ್ಗೆ ಜಾಗೃತಿ ಮೂಡಿಸಲಾಗತ್ತದೆ.ಭಾರತದ ಯುವಜನತೆ ಗಂಭೀರವಾದ ಮಾನಸಿಕ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಯುವಕರ ಮಾನಸಿಕ ಆರೋಗ್ಯ ಸ್ಥಿತಿಗಿಂತಲೂ 55 ವರ್ಷ ಮೇಲ್ಪಟ್ಟವರ ಮಾನಸಿಕ ಆರೋಗ್ಯ ಉತ್ತಮವಾಗಿದೆ ಎಂದು ‘ಗ್ಲೋಬಲ್ ಮೈಂಡ್ ಹೆಲ್ತ್‘ (Global mind health) ವರದಿ ನೀಡಿದೆ.

ಇದನ್ನೂ ಓದಿ : ಪುತ್ರ ಶೋಕದಿಂದ ಖಿನ್ನತೆ – ಮಗನ ನೆನಪಿನಲ್ಲೇ ದಂಪತಿ ಆತ್ಮಹ*ತ್ಯೆ!

ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನ ಶೈಲಿ, ಕೆಲಸದ ವಾತಾವರಣ, ವಿಪರೀತ ಸ್ಪರ್ಧಾತ್ಮಕವಾದ ಜಗತ್ತು ಮತ್ತು ವೇಗದ ಧಾವಂತದ ಬದುಕಿನಿಂದಾಗಿ ಯುವ ಜನರು ಬಹಳ ಬೇಗ ಉದ್ವೇಗಕ್ಕೆ, ಖಿನ್ನತೆಗೆ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ.
ಮಾನಸಿಕ ಆರೋಗ್ಯ ಸಮೀಕ್ಷೆಯಲ್ಲಿ 84 ದೇಶಗಳ ಪೈಕಿ ಭಾರತದ ಯುವಕರು 33 ಅಂಕಗಳನ್ನು ಗಳಿಸಿ 60ನೇ ಸ್ಥಾನ ಪಡೆದಿದ್ದಾರೆ. 55 ವರ್ಷ ಮೇಲ್ಪಟ್ಟವರು 96 ಅಂಕಗಳನ್ನು ಗಳಿಸಿ 49ನೇ ಸ್ಥಾನದಲ್ಲಿದ್ದಾರೆ. ಈ ಸಮಿಕ್ಷೆಯಲ್ಲಿ ಜಗತ್ತಿನಾದ್ಯಾಂತ ವಯಸ್ಕರ ಮಾನಸಿಕ ಆರೋಗ್ಯವು ಸ್ಥಿರತೆಯಲ್ಲಿದೆ ಎಂದು ‘ಗ್ಲೋಬಲ್ ಮೈಂಡ್ ಹೆಲ್ತ್ 2025ರ ವರದಿ ಹೇಳಿದೆ.

ಉಸಿರುಗಟ್ಟಿಸುವ ಪೈಪೋಟಿ, ಸದಾ ಕಾಲೆಳೆೆಯುವ ಪ್ರವೃತ್ತಿಯ ಜನರ ಧೋರಣೆ ಮತ್ತು ನಿಗದಿತ ಫಲಿತಾಂಶ ನೀಡಬೇಕಾದ ಒತ್ತಡಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ಯುವ ಜನರು ದಾರಿ ತಪ್ಪುವ ಸಾಧ್ಯತೆ ಹೆಚ್ಚಾಗುತ್ತಿದೆ. ಧೂಮಪಾನ, ಮದ್ಯಪಾನ, ಮಾದಕ ವಸ್ತು ಸೇವನೆ ಮುಂತಾದವುಗಳಿಗೆ ದಾಸರಾಗಿ ಅದೇ ವಿಷವರ್ತುಲದಲ್ಲಿ ಸಿಕ್ಕಿಕೊಂಡು ಹೊರಬರಲಾರದೆ ಶಾಶ್ವತವಾಗಿ ಮನೋ ರೋಗಿಗಳಾಗಿ ಬದಲಾಗುತ್ತಿರುವುದು ಬಹಳ ವಿಷಾದನೀಯ ಸಂಗತಿ.

ಯುವಕರಲ್ಲಿ ಯಾಕೆ ಹೆಚ್ಚಾಗ್ತಿದೆ ಒತ್ತಡ?

ಕುಟುಂಬದ ಜೊತೆ ಭಾವನಾತ್ಮಕ ಸಂಬಂಧ ಹೊಂದಿಲ್ಲದಿದ್ದರೆ ಅಂತವರು ಮಾನಸಿಕ ಸಮಸ್ಯೆಗೆ ಒಳಗಾಗುತ್ತಾರೆ. ಯುವಕರು ಹೆಚ್ಚಾಗಿ ಪೌಷ್ಟಿಕಾಂಶ ರಹಿತ ಆಹಾರ ಸೇವನೆ ಮಾಡುವುದರಿಂದ ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕರು ಚಿಕ್ಕ ವಯಸ್ಸಿನಲ್ಲೇ ಸ್ಮಾರ್ಟ್‌ಫೋನ್, ಕಂಪ್ಯೂಟರ್ ಬಳಕೆ ಮಾಡುವುದು ಕೂಡ ಮಾನಸಿಕ ಆರೋಗ್ಯಕ್ಕೆ ಅಡ್ಡಿ ಉಂಟುಮಾಡುತ್ತದೆ ಎಂದು ವರದಿ ಹೇಳಿದೆ.
ದಿನದ ಎಲ್ಲಾ ಗಂಟೆಗಳಲ್ಲೂ ಇವರು ಕೆಲಸದ ಬಗ್ಗೆಯೇ ಚಿಂತಿಸುತ್ತಿರುತ್ತಾರೆ. ಕುಳಿತಲ್ಲಿ ನಿಂತಲ್ಲಿ, ಮಲಗಿದಾಗಲೂ ಇವರಿಗೆ ಕೆಲಸದ್ದೇ ಚಿಂತೆ. ಕುಟುಂಬದವರ ಜೊತೆ ಪ್ರವಾಸಕ್ಕೆ ಹೋದಾಗಲೂ ಆಫೀಸಿನ ವ್ಯವಹಾರದ ಬಗ್ಗೆ ಚಿಂತಿಸಿರುತ್ತಾರೆ. ಆಫೀಸು, ಹಣದ ವ್ಯವಹಾರ, ಆಫೀಸಿನ ಸಹದ್ಯೋಗಿ ಹಾಗೂ ಅವರ ಆಲೋಚನೆಗಳೆಲ್ಲವೂ ಆಫೀಸಿನ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತದೆ.

ಮಾನಸಿಕ ಒತ್ತಡದ ಲಕ್ಷಣಗಳು:

ಮಾನಸಿಕ ಒತ್ತಡ ಎನ್ನುವುದು ಬಹಳ ಅಪಾಯಕಾರಿ ಮನೋಸ್ಥಿತಿಯಾಗಿದ್ದು, ದೇಹದಲ್ಲಿ ರಸದೂತಗಳ ಸ್ರವಿಸುವಿಕೆ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ರಸದೂತಗಳ ಏರಿಳಿತದಿಂದಾಗಿ ದೇಹದ ಹೆಚ್ಚಿನ ಅಂಗಾಂಗಳ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ಇದನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಹೆಚ್ಚಿನವರಿಗೆ ತಾವು ಒತ್ತಡದಲ್ಲಿ ಇದ್ದೇವೆ ಎಂಬುದರ ಬಗ್ಗೆ ಅರಿವೂ ಇರುವುದಿಲ್ಲ.

ಹೆಚ್ಚಿನ ಸುದ್ದಿ

Change Language »
error: Content is protected !!