ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ 2023ರ ವಿಶ್ವ ಸಂತೋಷ ಸೂಚ್ಯಂಕದಲ್ಲಿ ಸತತ ಆರನೇ ಬಾರಿ ಫಿನ್ಲೆಂಡ್ ಮೊದಲ ಸ್ಥಾನ ಪಡೆದಿದೆ. ಡೆನ್ಮಾರ್ಕ್ 2ನೇ ಸ್ಥಾನ ಪಡೆದಿದ್ದರೆ, ಐಸ್‍ಲ್ಯಾಂಡ್ 3ನೇ ಸ್ಥಾನ ಪಡೆದಿದೆ.
ವಿಶ್ವ ಸಂತೋಷ ಸೂಚ್ಯಂಕಪಟ್ಟಿಯಲ್ಲಿ ಭಾರತಕ್ಕೆ 126 ನೇ ಸ್ಥಾನ ದೊರೆತಿದ್ದು, ಭಾರತಕ್ಕಿಂತ ಆರ್ಥಿಕವಾಗಿ ಕೆಳಸ್ತರದಲ್ಲಿರುವ ದೇಶಗಳಾದ ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಶ್ರೀಲಂಕಾ ಭಾರತಕ್ಕಿಂತ ಮೇಲಿನ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಆಫ್ಘಾನಿಸ್ತಾನ ಕೊನೆ ಸ್ಥಾನ ಪಡೆದಿದೆ.
ಗ್ಯಾಲಪ್ ವರ್ಲ್ಡ್ ಪೋಲ್ ಎಂದು ಕರೆಯಲ್ಪಡುವ ಆರು ಅಂಶಗಳ ಮಾನದಂಡವನ್ನು ಈ ಸೂಚ್ಯಂಕ ಆಧರಿಸಿದ್ದು, ದೇಶೀಯ ಉತ್ಪನ್ನ, ತಲಾದಾಯ, ಸಾಮಾಜಿಕ ಬೆಂಬಲ, ಆರೋಗ್ಯಕರ ಜೀವಿತಾವಧಿ, ಸ್ವಾತಂತ್ರ್ಯ, ಔದಾರ್ಯ ಮತ್ತು ಭ್ರಷ್ಟಾಚಾರದ ಪ್ರಮಾಣವನ್ನು ಅವಲಂಬಿಸಿ ಸೂಚ್ಯಂಕ ನೀಡಲಾಗುತ್ತದೆ.
ಇಸ್ರೇಲ್, ನೆದರ್‍ಲ್ಯಾಂಡ್, ಸ್ವೀಡನ್, ನಾರ್ವೆ, ಸ್ವಿಜರ್ಲೆಂಡ್, ಲಕ್ಸಂಬರ್ಗ್, ನ್ಯೂಜಿಲೆಂಡ್ ಇವು ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದ ದೇಶಗಳಾಗಿವೆ.
ಯುದ್ದಪೀಡಿತ ದೇಶಗಳಾಗಿರುವ ರಷ್ಯಾ 72ನೇ ಸ್ಥಾನಕ್ಕೆ ಕುಸಿದಿದ್ದರೆ, ಉಕ್ರೇನ್ 92 ನೇ ಸ್ಥಾನಕ್ಕೆ ಕುಸಿದಿದೆ. ಯುದ್ದದ ಪರಿಣಾಮ ಇಲ್ಲಿನ ನಾಗರಿಕರ ಸಂತಸವನ್ನು ಕಸಿದುಕೊಂಡಿರುವುದು ಸಾಬೀತಾಗಿದೆ.