ನವದೆಹಲಿ: ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‌ಗಳ ಭರ್ಜರಿ ಜಯದೊಂದಿಗೆ ತನ್ನ ಚೊಚ್ಚಲ ಮಹಿಳಾ ವಿಶ್ವಕಪ್ ಪ್ರಶಸ್ತಿಯನ್ನು (Womens World Cup) ಗೆದ್ದು ಬೀಗಿರುವ ಭಾರತೀಯ ಮಹಿಳಾ ಪಡೆಯನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ತಮ್ಮ ನಿವಾಸದಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
52 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ವಿಜಯ
ನವಿ ಮುಂಬೈ ನಲ್ಲಿ ನಡೆದ ಇವೊಂದು ಹೈವೋಲ್ಟೇಜ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಟೀಂ ಇಂಡಿಯಾವು ಇತಿಹಾಸ ಬರೆದಿದೆ. 52 ವರ್ಷಗಳ ಏಕದಿನ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನು ಭಾರತ ಮಹಿಳಾದ ತಂಡ ಅಲಂಕರಿಸಿದ್ದು, ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ, ಈಗಾಗಲೇ ನರೇಂದ್ರ ಮೋದಿ ಅವರು ಮಹಿಳಾ ತಂಡಕ್ಕೆ ಅಭಿನಂದನೆ ಅರ್ಪಿಸಿದ್ದು, ಈಗ ವೀರ ವನಿತೆಯರನ್ನ ಈಗ ನೇರವಾಗಿ ಭೇಟಿ ಆಗಿದ್ದಾರೆ.
ಮಹಿಳಾ ವಿಶ್ವಕಪ್ ವಿಜೇತರಿಗೆ ಬಿಸಿಸಿಐನಿಂದ 51 ಕೋಟಿ ರೂ
ಇತಿಹಾಸ ಬರೆದ ಮಹಿಳೆಯರಿಗೆ ಚಾಂಪಿಯನ್ ಪಟ್ಟದ ಜೊತೆ ಬೃಹತ್ ಬಹುಮಾನ ಮೊತ್ತ ಕೂಡ ಸಿಕ್ಕಿದೆ. ಈ ಬಾರಿ ಐಸಿಸಿ ಒಟ್ಟು 122.5 ಕೋಟಿ ರೂಪಾಯಿಯನ್ನು ಘೋಷಿಸಿದ್ದು, ಇದರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಟೀಂ ಇಂಡಿಯಾಗೆ 39.55 ಕೋಟಿ ರೂಪಾಯಿಯನ್ನು ನೀಡಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಐಸಿಸಿ ಇಷ್ಟು ದೊಡ್ಡ ಬಹುಮಾನವನ್ನು ನೀಡುತ್ತಿರುವುದು ಎನ್ನಲಾಗಿದೆ. ಚೊಚ್ಚಲ ಬಾರಿಗೆ ವಿಶ್ವಕಪ್ ಗೆದ್ದಿದ್ದಕ್ಕೆ 51 ಕೋಟಿ ರೂ. ನೀಡುವುದಾಗಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಘೋಷಣೆ ಮಾಡಿದ್ದಾರೆ.
#WATCH | Delhi: World Cup-winning Indian Women’s Cricket Team leaves from a hotel in Delhi to meet Prime Minister Narendra Modi.
📹: ANI pic.twitter.com/HHNCd0N7yA
— Hindustan Times (@htTweets) November 5, 2025
ಭಾರತಕ್ಕೆ ಈ ಗೆಲುವು ಹಲವು ವರ್ಷಗಳ ಕನಾಸಗಿಯೇ ಉಳಿದಿತ್ತು. ಇದೀಗ ಇದನ್ನು ನನಸು ಮಾಡುವ ಮೂಲಕ ಭಾರತದ ವನಿತೆಯರು ಇತಿಹಾಸ ನಿರ್ಮಿಸಿದ್ದಾರೆ. 2005, 2017 ಮತ್ತು 2020 ರಲ್ಲಿ ಭಾರತದ ಸೋಲುಗಳ ನಂತರ ಇದೀಗ ಹೊಸ ಚಾಂಪಿಯನ್ ಕಿರೀಟವನ್ನು ಅಲಂಕರಿಸಿದೆ. ಅದರೊಂದಿಗೆ ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಸುವರ್ಣ ಅಧ್ಯಾಯ ಪ್ರಾರಂಭವಾಗಿದೆ.
#WATCH | Delhi: World Cup-winning Indian Women’s Cricket Team leaves from a hotel in Delhi to meet Prime Minister Narendra Modi.
Team India lifted its maiden ICC Women’s World Cup trophy on November 2.
📹: ANI
For more news and updates: https://t.co/hMfOeLPj0n pic.twitter.com/sD9aRgoAH0
— Hindustan Times (@htTweets) November 5, 2025
ಭಾರತ ತಂಡದ ಇನ್ನಿಂಗ್ಸ್ ಆರಂಭದಲ್ಲಿ ಅದ್ಭುತವಾಗಿದ್ದಾಗಲೇ ಮಳೆ ಅಡ್ಡಿಯಾಗಿತ್ತು. ಇದರಿಂದ 90 ನಿಮಿಷಗಳ ವಿರಾಮದ ಬಳಿಕ ಪಂದ್ಯವನ್ನು ಮತ್ತೆ ಮುಂದುವರಿಸಲಾಯಿತು. ಈ ನಡುವೆ ವರ್ಮಾ ಮತ್ತು ಸ್ಮೃತಿ ಮಂಧನಾ ಅವರ ಅದ್ಭುತ ಪ್ರದರ್ಶನ ನಿಷ್ಪರಿಣಾಮಕಾರಿಯಾಗಿ ಇತ್ತು. ಆಟದಲ್ಲಿ ಮಂಧನಾ ಅತ್ಯುತ್ತಮ ಪ್ರದರ್ಶನ ನೀಡಿದರೂ ಕೂಡಾ ಎಲ್ಲರ ಗಮನ ಸೆಳೆದಿದ್ದು ಶೆಫಾಲಿ.
ಇದನ್ನೂ ಓದಿ: ಮಹಿಳಾ ವಿಶ್ವಕಪ್ ಕಿರೀಟ ಭಾರತದ ವನಿತೆಯರ ಮುಡಿಗೆ – ಚೊಚ್ಚಲ ಸಾಧನೆಗೆ ದೇಶವೇ ಖುಷ್!