ಸಿಂಗಾಪುರದಲ್ಲಿ ಶುಕ್ರವಾರ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಚೀನಾ ಚಾಂಪಿಯನ್ ಡಿಂಗ್ ಲಿರೆನ್ ಮತ್ತು ಭಾರತದ ಚಾಲೆಂಜರ್ ಡಿ ಗುಕೇಶ್ ನಡುವಿನ ನಾಲ್ಕನೇ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ.ಒಟ್ಟು 14 ಪಂದ್ಯಗಳ ಸರಣಿಯ ನಾಲ್ಕು ಪಂದ್ಯಗಳ ಕೊನೆಯಲ್ಲಿ ಆಟಗಾರರು ತಲಾ 2 ಪಾಯಿಂಟ್‌ಗಳಲ್ಲಿ ಸಮಬಲ ಹೊಂದಿದ್ದ ಕಾರಣ, ಪಂದ್ಯ ಡ್ರಾ ಆಗಿದೆ.
ಇಬ್ಬರೂ ಆಟಗಾರರು ತಮ್ಮ ಸಮಯವನ್ನು ಉತ್ತಮವಾಗಿ ನಿರ್ವಹಿಸಿದರು ಮತ್ತು ಸಮತೋಲಿತ ಆಟದಲ್ಲಿ ಒಬ್ಬರೂ ಯಾವ ಹಂತದಲ್ಲೂ ಹಿಂದೆ ಬೀಳಲಿಲ್ಲ, ಹೀಗಾಗಿ ಈ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳುವಂತಾಯಿತು. ಮಿಡ್‌ಗೇಮ್‌ನಲ್ಲಿ ಲಿರೆನ್ ಸ್ವಲ್ಪ ಮೇಲುಗೈ ಸಾಧಿಸಿದ್ಧರಾದರು, ಗುಕೇಶ್ ಒಂದು ಹಂತದಲ್ಲಿ ಮತ್ತೆ ಕಮ್ ಬ್ಯಾಕ್ ಮಾಡಿದ್ರು.
ಹೀಗೆ ಪಂದ್ಯದುದ್ದಕ್ಕೂ ಸಮಬಲ ಹೋರಾಟ ಕಂಡುಬಂದಿದ್ದರಿಂದ ಅಂತಿಮವಾಗಿ ಚಾಂಪಿಯನ್ಸ್ ನಡುವಿನ ಪಂದ್ಯ ಡ್ರಾ ನಲ್ಲಿ ಅಂತ್ಯವಾಗಿದೆ.