ನವದೆಹಲಿ: ಕೆಟ್ಟ ವಸ್ತ್ರಗಳನ್ನು ಧರಿಸುವ ಮಹಿಳೆಯರು ಶೂರ್ಪನಕಿಯಂತೆ ಕಾಣಿಸುತ್ತಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ ವರ್ಗಿಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗುರುವಾರ ಇಂದೋರ್ ನಲ್ಲಿ ನಡೆದ ಹನುಮಾನ್ ಜಯಂತಿಯ ಸಂದರ್ಭ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
“ನಾವು ಸಾಮಾನ್ಯವಾಗಿ ಮಹಿಳೆಯರಲ್ಲಿ ದೇವತೆಗಳನ್ನು ನೋಡುತ್ತೇವೆ. ಆದರೆ ಕೆಟ್ಟ ವಸ್ತ್ರ ಧರಿಸಿ ಓಡಾಡುವ ಮಹಿಳೆಯರು ದೇವತೆಗಳಂತೆ ಕಾಣಿಸುವುದಿಲ್ಲ. ಬದಲಾಗಿ ಶೂರ್ಪನಖಿಯರಂತೆ ಕಾಣಿಸುತ್ತಾರೆ ಎಂದು ವಿಜಯ ವರ್ಗೀಯ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.