ಬೆಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿರುವ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪೂರ್ಣಪ್ರಜ್ಞ ಲೇಔಟ್‍ನಲ್ಲಿ ನಡೆದಿದೆ. ರಶ್ಮಿ (32) ಮೃತ ದುರ್ದೈವಿ. ಪತಿ ಅರವಿಂದ್ ಈ ಸಾವಿಗೆ ಕಾರಣ ಎಂದು ರಶ್ಮಿ ಪೋಷಕರು ಆರೋಪಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದ ಅರವಿಂದ್ ಹತ್ತು ವರ್ಷದ ಹಿಂದೆ ರಶ್ಮಿಯೊಡನೆ ವಿವಾಹವಾಗಿದ್ದ. ಇಬ್ಬರಿಗೂ ಐದು ವರ್ಷದ ಗಂಡು ಮಗುವೂ ಇದೆ. ರಶ್ಮಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ರಶ್ಮಿ ಆತ್ಮಹತ್ಯೆಗೆ ಇದುವರೆಗೂ ನಿಖರ ಕಾರಣ ತಿಳಿದು ಬಂದಿಲ್ಲ. ದೂರು ದಾಖಲಿಸಿಕೊಂಡಿರುವ ಸುಬ್ರಹ್ಮಣ್ಯಪುರ ಠಾಣೆಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.