Sunday, November 3, 2024
Homeದೇಶಒಂದು ಕೋಟಿ ರೂ. ದಂಡ ವಸೂಲಿ: ಮಹಿಳಾ ರೇಲ್ವೇ ಅಧಿಕಾರಿ ಹೆಗ್ಗಳಿಕೆ

ಒಂದು ಕೋಟಿ ರೂ. ದಂಡ ವಸೂಲಿ: ಮಹಿಳಾ ರೇಲ್ವೇ ಅಧಿಕಾರಿ ಹೆಗ್ಗಳಿಕೆ

ಟಿಕೆಟ್ ಪಡೆಯದೇ ಸಂಚರಿಸುವ ಪ್ರಯಾಣಿಕರನ್ನು ಹಿಡಿದು ಅವರಿಗೆ ದಂಡ ವಿಧಿಸುವುದು ರೇಲ್ವೇ ಟಿಕೆಟ್ ಇನ್ಸ್‍ಪೆಕ್ಟರ್ ಕರ್ತವ್ಯವೇನೋ ಹೌದು. ಆದರೆ ಇಲ್ಲೊಬ್ಬ ಮಹಿಳಾ ಅಧಿಕಾರಿ ತಮ್ಮ ಕರ್ತವ್ಯದಲ್ಲಿ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಪ್ರಯಾಣಿಕರಿಂದ ಒಂದು ಕೋಟಿ ರೂಪಾಯಿ ದಂಡ ವಸೂಲಿ ಮಾಡುವ ಮೂಲಕ ರೈಲ್ವೇ ಇಲಾಖೆಯ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ದಕ್ಷಿಣ ರೇಲ್ವೇ ವಿಭಾಗದ ಛೀಫ್ ಟಿಕೆಟ್ ಇನ್ಸ್‍ಪೆಕ್ಟರ್ ರೋಸಲಿನ್ ಆರೋಕ್ಯ ಮೇರಿ ಈಗ ಎಲ್ಲೆಡೆ ಪ್ರಶಂಸೆ ಪಡೆಯುತ್ತಿರುವ ಮಹಿಳೆ. ಇದುವರೆಗೂ ಇವರು ಪ್ರಯಾಣಿಕರಿಂದ ಸಂಗ್ರಹಿಸಿರುವ ಒಟ್ಟು ದಂಡದ ಮೊತ್ತ 1.03 ಕೋಟಿ ರೂ. ರೈಲ್ವೇ ಇಲಾಖೆ ಈಕೆಯ ಸಾಹಸಗಾಥೆಯನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಕರ್ತವ್ರ್ಯದೆಡೆಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿರುವ ಶ್ರೀಮತಿ ರೋಸಲಿನ್ ಆರೋಕ್ಯ ಮೇರಿ ಇದುವರೆಗೂ 1.03 ಕೋಟಿ ರೂ. ದಂಡವನ್ನು ಸಂಗ್ರಹಿಸಿ ಈ ಹೆಗ್ಗಳಿಕೆ ಪಾತ್ರವಾಗಿರುವ ಮೊದಲ ಮಹಿಳೆಯಾಗಿದ್ದಾರೆ ಎಂದು ರೇಲ್ವೇ ಇಲಾಖೆ ಕೊಂಡಾಡಿದೆ.

ಹೆಚ್ಚಿನ ಸುದ್ದಿ

error: Content is protected !!