ಮಲೇಶ್ಯಾ: ಪಫರ್ ಫಿಶ್ ಎಂಬ ವಿಷಯುಕ್ತ ಮೀನನ್ನು ತಿಂದ ಪರಿಣಾಮ 83 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರ ಪತಿ ಕೋಮಾಗೆ ಜಾರಿದ ಘಟನೆ ಮಲೇಶ್ಯಾದಲ್ಲಿ ನಡೆದಿದೆ.
“ನನ್ನ ತಂದೆ ಯಾವಾಗಲೂ ಖರೀದಿಸುವ ಅಂಗಡಿಯಿಂದಲೇ ಮೀನು ಖರೀದಿಸಿದ್ದರು. ಆ ಮೀನಿನ ಬಗ್ಗೆ ತಂದೆಗೆ ತಿಳಿದಿರಲಿಲ್ಲ” ಎಂದು ಮೃತ ಮಹಿಳೆಯ ಪುತ್ರಿ ಹೇಳಿದ್ದಾರೆ.
ಪಫರ್ ಫಿಶ್ ಬಲೂನಿನ ಆಕಾರದ ಮೀನಾಗಿದ್ದು, ವಿಷಯುಕ್ತವಾಗಿದೆ. ಆದರೆ ವಿಷದ ಅಂಶಗಳಿರುವ ಭಾಗಗಳನ್ನು ಸೂಕ್ಷ್ನವಾಗಿ ಬೇರ್ಪಡಿಸಿ ಅದರ ಮಾಂಸ ಸೇವಿಸುತ್ತಾರೆ.
ಮೀನು ತಿಂದ ನಂತರ ಮಹಿಳೆಗೆ ಉಸಿರಾಟದ ತೊಂದರೆ ಕಾಣಿಸಿದ್ದು, ನಡುಕ ಶುರುವಾಗಿದೆ. ಪತಿಗೂ ಇದೇ ರೀತಿಯ ಲಕ್ಷಣಗಳು ಕಾಣಿಸಿದ್ದು, ದಂಪತಿಯ ಪುತ್ರ ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಒಂದು ಗಂಟೆಯಲ್ಲಿ ಮಹಿಳೆ ಮೃತಪಟ್ಟಿದ್ದಾರೆ.