Wednesday, August 19, 2026
Homeಟಾಪ್ ನ್ಯೂಸ್CHENNAMMA: ಬೆಟ್ಟದ ರಂಗನಾಥನ ತಪ್ಪಲಿನಲ್ಲೇ ಚೆನ್ನಮ್ಮನ ಅಂತ್ಯಕ್ರಿಯೆ ಏಕೆ? ಕಾರಣ ಬಿಚ್ಚಿಟ್ಟ ಅಳಿಯ ಡಾ ಮಂಜುನಾಥ್

CHENNAMMA: ಬೆಟ್ಟದ ರಂಗನಾಥನ ತಪ್ಪಲಿನಲ್ಲೇ ಚೆನ್ನಮ್ಮನ ಅಂತ್ಯಕ್ರಿಯೆ ಏಕೆ? ಕಾರಣ ಬಿಚ್ಚಿಟ್ಟ ಅಳಿಯ ಡಾ ಮಂಜುನಾಥ್

ಬೆಂಗಳೂರು: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ ( H.D. Deve Gowda )  ಅವರ ಪತ್ನಿ ಚೆನ್ನಮ್ಮ (Chennamma) ದೇವೇಗೌಡ ಅವರು ಶನಿವಾರ ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ. ಚೆನ್ನಮ್ಮ (Chennamma Deve Gowda) ಅವರ ಅಂತ್ಯಕ್ರಿಯೆ ನಾಳೆ (ಜುಲೈ 20) ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದ ಸಮೀಪವಿರುವ ಕ್ಯಾತನಹಳ್ಳಿ ಗ್ರಾಮದ ಬೆಟ್ಟದ ರಂಗನಾಥ ಸ್ವಾಮಿ ತಪ್ಪಲಿನಲ್ಲಿ ನಡೆಯಲಿದೆ.

ಚೆನ್ನಮ್ಮನವರ ಅಂತ್ಯಕ್ರಿಯೆ ಬೆಟ್ಟದ ರಂಗನಾಥ ಸ್ವಾಮಿ ತಪ್ಪಲಿನಲ್ಲೇ ಏಕೆ ಮಾಡಲಾಗುತ್ತಿದೆ? ಬೇರೆ ಸ್ಥಳದಲ್ಲಿ ಏಕೆ ಮಾಡಲಿಲ್ಲ? ಇಲ್ಲೇ ಮಾಡುವುದರ ಇಂದಿನ ಉದ್ದೇಶ ಏನು ಎನ್ನುವುದಾಗಿ ಮಾತನಾಡಿದ ಡಾ ಮಂಜುನಾಥ್, ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದ ಸಮೀಪವಿರುವ ಕ್ಯಾತನಹಳ್ಳಿ ಗ್ರಾಮದ ಬೆಟ್ಟದ ರಂಗನಾಥ ಸ್ವಾಮಿ ತಪ್ಪಲಿನಲ್ಲಿ ನಡೆಯಲಿದೆ. ಅವರು ಹೆಚ್ಚಿನ ಕಾಲ ಇಲ್ಲಿಯೇ ಇದ್ದರು. ಸುತ್ತಮುತ್ತಲಿನ ಊರುಗಳ ಜೊತೆಗೆ ಅವರಿಗೆ ಅವಿನಾಭಾವ ಸಂಬಂಧ ಇದೆ. ಹೀಗಾಗಿ ಎಲ್ಲರೂ ಸೇರಿ ಬೆಟ್ಟದ ರಂಗನಾಥನ ತಪ್ಪಲಿನಲ್ಲೇ ಚೆನ್ನಮ್ಮನ ಅಂತ್ಯಕ್ರಿಯೆ ಮಾಡಬೇಕು ಎನ್ನುವ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

ನಾಳೆ ೨ ಗಂಟೆಗೆ ಅವರ ಅಂತ್ಯಕ್ರೀಯೆ ನಡೆಯಲಿದೆ. ಈಗಾಗಲೇ ಎಲ್ಲ ಸಿದ್ಧತೆ ಪೂರ್ಣಗೊಂಡಿವೆ. ಮನೆಯಲ್ಲಿ ನಡೆಯಬೇಕಾದ ವಿಧಿವಿಧಾನ ಪ್ರಕ್ರಿಯೆಗಳನ್ನು ಮುಗಿಸಿಕೊಂಡು ನಂತರ ಅಂತ್ಯಕ್ರೀಯೆ ಮಾಡಲಾಗುತ್ತದೆ. ಮುಂದೊಂದು ದಿನ ಈ ಜಾಗವನ್ನು ಟೋರಿಸ್ಟ್‌ ಜಾಗವನ್ನಾಗಿ ಮಾಡುವ ಯೋಚನೆ ಇದೆ ಎಂದಿದ್ದಾರೆ.

ಸಕಲ ಸರ್ಕಾರಿ ಗೌರವಗೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ಈಗಾಗಲೇ ಹಾಸನ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇನ್ನು ಅಂತ್ಯಕ್ರಿಯೆ ಸ್ಥಳಕ್ಕೆ ಖುದ್ದು ದೇವೇಗೌಡ, ಅಳಿಯ ಡಾ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!