ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಅಧಿಕೃತ ನಿವಾಸದಲ್ಲಿ ದೀಪಾವಳಿ ಆಚರಣೆಯ ಅಂಗವಾಗಿ ಶ್ವೇತಭವನದ ಮಿಲಿಟರಿ ಬ್ಯಾಂಡ್ ಓಎಂ ಜೈ ಜಗದೀಶ್ ಭಕ್ತಿಗೀತೆಯನ್ನು ನುಡಿಸಿದೆ.
ಈ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಬ್ಯಾಂಡ್‌ನ ನಾಲ್ವರು ಸದಸ್ಯರು ಸೆಲ್ಲೋ, ಪಿಟೀಲು, ಪಿಯಾನೋ ಮತ್ತು ಡ್ರಮ್‌ಗಳಲ್ಲಿ ಹಾಡನ್ನು ನುಡಿಸುವುದನ್ನು ನೋಡಬಹುದಾಗಿದೆ.
Beautifully done! 👏
The White House military band played Om Jai Jagdish Hare in celebration of #Diwali. 🪔✨pic.twitter.com/Jy3hKqLpwE
— Nigel D’Souza (@Nigel__DSouza) October 31, 2024
ಯುಎಸ್ ಅಧ್ಯಕ್ಷ ಜೋ ಬೈಡೆನ್ ಜನರಿಗೆ ದೀಪಾವಳಿ ಶುಭಾಶಯಗಳನ್ನು ಸಲ್ಲಿಸಿದರು. ಇಂದು ಹಬ್ಬವನ್ನು ಶ್ವೇತಭವನದಲ್ಲಿ ಹೆಮ್ಮೆಯಿಂದ ಆಚರಿಸಲಾಗುತ್ತದೆ. ದೀಪಾವಳಿ ನಿಮಿತ್ತ ವೈಟ್ ಹೌಸ್ ಮಿಲಿಟರಿ ಬ್ಯಾಂಡ್ ಓಂ ಜೈ ಜಗದೀಶ್ ಹರೇ ನುಡಿಸುವುದನ್ನು ಕೇಳಲು ಅದ್ಭುತವಾಗಿದೆ ಎಂದು ಹೇಳಿದ್ದಾರೆ.