ಮೆಟಾ-ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಪ್ ಹೊಸ ಹೊಸ ವೈಶಿಷ್ಟ್ಯಗಳನ್ನುಗಳನ್ನು ಅಪ್‌ಡೇಟ್ ಮಾಡುತ್ತಲೇ ಇರುತ್ತದೆ. ಇದೀಗ ಹೊಸ ಲಕ್ಷಣ ಅಪ್‌ಡೇಟ್ ಮಾಡುವ ಎಲ್ಲಾ ತಯಾರಿಯಲ್ಲಿದೆ.
ವಾಟ್ಸಪ್ ಹೊಸ “ಲಾಕ್ ಚಾಟ್” ವೈಶಿಷ್ಟ್ಯ ಕುರಿತು ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಇದು ಬಳಕೆದಾರರಿಗೆ ಚಾಟ್‌ಗಳನ್ನು ಲಾಕ್ ಮಾಡಲು ಮತ್ತು ಅವುಗಳನ್ನು ಯಾರಿಗೂ ಕಾಣದಂತೆ ಮರೆಮಾಚಲು ಅನುಕೂಲವಾಗಲಿದೆ ಎಂದು ತಿಳಿದು ಬಂದಿದೆ.
ಈ ಹೊಸ ವೈಶಿಷ್ಟ್ಯವು ಬಳಕೆದಾರರು ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲಿದ್ದು, ಬಳಕೆದಾರರು ತಮ್ಮ ಅತ್ಯಂತ ಖಾಸಗಿ ಚಾಟ್‌ಗಳನ್ನು ಸಂಪರ್ಕದಲ್ಲಿರುವವರು ಅಥವಾ ಗುಂಪಿನೊಳಗೆ ತಿಳಿಯದಂತೆ ಲಾಕ್ ಮಾಡಲು ಸಹಾಯ ಮಾಡುತ್ತದೆ ಎಂದು WABetaInfo ವರದಿ ಮಾಡಿದೆ.
ಅಕಸ್ಮಾತ್ ಚಾಟ್ ಲಾಕ್ ಆದ ಸಂದರ್ಭದಲ್ಲಿ ಅದನ್ನು ಫಿಂಗರ್ ಪ್ರಿಂಟ್ ಹಾಗೂ ಪಾಸ್ ಕೋಡ್ ಬಳಸಿ ಮಾತ್ರ ತೆಗೆಯಲು ಸಾಧ್ಯವಾಗುತ್ತದೆ, ಇಲ್ಲದಿದ್ದಲ್ಲಿ ಚಾಟ್ ವಿವರ ತಿಳಿಯುವುದು ಅಸಾಧ್ಯ ಅಲ್ಲದೆ, ಯಾರಾದರೂ ಅನ್ಯರು ಫೋನ್ ಅನ್ನು ಪ್ರವೇಶಿಸಲು ಪ್ರಯತ್ನಿಸಿದರೆ ಚಾಟ್ ಓಪನ್ ಮಾಡಲು ಅದರಲ್ಲಿನ ಚಾಟ್ ಅನ್ನು ಕ್ಲಿಯರ್ ಮಾಡಲು ಕೇಳುತ್ತದೆ ಎಂದು ಹೇಳಿದೆ.