Wednesday, March 26, 2025
Homeಟಾಪ್ ನ್ಯೂಸ್ಕರ್ನಾಟಕ ಚುನಾವಣೆ : ನೀತಿ ಸಂಹಿತೆ ಜಾರಿ - ರಾಜ್ಯದಲ್ಲಿ ಬದಲಾಗೋದೇನು?

ಕರ್ನಾಟಕ ಚುನಾವಣೆ : ನೀತಿ ಸಂಹಿತೆ ಜಾರಿ – ರಾಜ್ಯದಲ್ಲಿ ಬದಲಾಗೋದೇನು?

ಬೆಂಗಳೂರು: 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳಾ ಪಟ್ಟಿ ಪ್ರಕಟವಾಗಿದ್ದು, ಚುನಾವಣಾ ದಿನಾಂಕ ಘೋಷಣೆಯಾದ ಕ್ಷಣದಿಂದಲೇ ರಾಜ್ಯದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ.

ನೀತಿ ಸಂಹಿತೆ ಜಾರಿಯಾದ ಕ್ಷಣದಿಂದ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಾಗಲಿದೆ. ಸರ್ಕಾರ ಅಧಿಕಾರದಲ್ಲಿದ್ದರೂ ಕೂಡಾ ಯಾವುದೇ ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡುವುದಾಗಲೀ ಸಚಿವರು ಸರ್ಕಾರೀ ಸವಲತ್ತುಗಳನ್ನಾಗಲೀ ಬಳಸುವಂತಿಲ್ಲ.. ನೀತಿ ಸಂಹಿತೆ ಜಾರಿಯಿಂದ ಉಂಟಾಗುವ ಬದಲಾವಣೆಗಳು ಹೀಗಿವೆ

ವಿಧಾನಸೌಧ, ವಿಕಾಸಸೌಧದಲ್ಲಿ ಸಚಿವರ ಯಾವುದೇ ಸಭೆಗೆ ಅವಕಾಶವಿಲ್ಲ

ಸಚಿವರಿಗೆ ಸರ್ಕಾರಿ ವಾಹನ ಸೌಲಭ್ಯ ಬಂದ್ – ಖಾಸಗಿ ಕಾರ್‌ನಲ್ಲೇ ಓಡಾಬೇಕು

ಸರ್ಕಾರೀ ಬಂಗಲೆ ಅತಿಥಿ ಗೃಹಗಳನ್ನು ಶಾಸಕರು, ಸಚಿವರು ಬಳಸುವಂತಿಲ್ಲ

ಸರ್ಕಾರಿ ಆದೇಶ ಹೊರಡಿಸಲು ಸಚಿವರಿಗೆ ಅಧಿಕಾರವಿಲ್ಲ

ಸಚಿವಾಲಯದ ಸಿಬ್ಬಂದಿಯನ್ನು ತಮ್ಮ ಕೆಲಸಕ್ಕೆ ಸಚಿವರು ಶಾಸಕರು ಬಳಸಿಕೊಳ್ಳುವಂತಿಲ್ಲ

ರಾಜಕೀಯ ಸಭೆ, ಸಮಾರಂಭ ನಡೆಸಲು ಆಡಳಿತದ ಅನುಮತಿ ಕಡ್ಡಾಯ

ಚುನಾವಣಾ ಪ್ರಚಾರ ಮೆರವಣಿಗೆ ಮಾಡಲು ಆಡಳಿತದ ಅನುಮತಿ ಪಡೆಯುವುದು ಕಡ್ಡಾಯ

ಸರ್ಕಾರೀ ಕಾರ್ಯಕ್ರಮ ಆಯೋಜನೆ, ಅನುದಾನ ಬಿಡುಗಡೆ, ಹೊಸ ಯೋಜನೆಗಳ ಘೋಷಣೆ, ಶಂಕುಸ್ಥಾಪನೆ, ಗುದ್ದಲಿ ಪೂಜೆ ಹಾಗೂ ಉದ್ಘಾಟನೆ- ಇದಾವುದಕ್ಕೂ ಅವಕಾಶವಿಲ್ಲ

ಚುನಾವಣಾ ಪ್ರಚಾರ ಮೆರವಣಿಗೆ ಮಾಡಲು ಆಡಳಿತದ ಅನುಮತಿ ಪಡೆಯುವುದು ಕಡ್ಡಾಯ

ಹೆಚ್ಚಿನ ಸುದ್ದಿ

error: Content is protected !!