Monday, August 17, 2026
Homeಕ್ರೈಂWEST BENGAL : ಪ. ಬಂಗಾಳ ರಾಜ್ಯಪಾಲರಿಗೆ ಜೀವ ಬೆದರಿಕೆ - ಆರೋಪಿ ಅರೆಸ್ಟ್!

WEST BENGAL : ಪ. ಬಂಗಾಳ ರಾಜ್ಯಪಾಲರಿಗೆ ಜೀವ ಬೆದರಿಕೆ – ಆರೋಪಿ ಅರೆಸ್ಟ್!

ಕೋಲ್ಕತ್ತಾ : ಪಶ್ಚಿಮ ಬಂಗಾಳದ (west bengal) ರಾಜ್ಯಪಾಲ (Governor) ಸಿ.ವಿ. ಆನಂದ ಬೋಸ್ (cv anand bose )ಗೆ ಜೀವ ಬೆದರಿಕೆ ಹಾಕಿದ್ದ ಕೇಸ್ ಸುಖಾoತ್ಯವಾಗಿದ್ದು, ಪೊಲೀಸರು ಆರೋಪಿಯ ಹೆಡೆಮುರಿಕಟ್ಟಿದ್ದಾರೆ.

ಗವರ್ನರ್ ಗೆ ಇ-ಮೇಲ್ ಮೂಲಕ ಜೀವಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಆಸಾಮಿ ರಾಜ್ಯಪಾಲರ ಅಧಿಕೃತ ಇ-ಮೇಲ್ ಐಡಿಗೆ ಸಂದೇಶ ಕಳುಹಿಸಿದ್ದ ಈ ವ್ಯಕ್ತಿ ರಾಜ್ಯಪಾಲರನ್ನು ಬಾಂಬ್ ಹಾಕಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದನು. ಆರೋಪಿಯು ಇ-ಮೇಲ್‌ನಲ್ಲಿ ತನ್ನ ಮೊಬೈಲ್ ಸಂಖ್ಯೆಯನ್ನು ಸಹ ನಮೂದಿಸಿದ್ದನು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಯ ಪತ್ತೆ ಹಚ್ಚಿ ಬಂಧಿಸುವಲ್ಲಿ ಸಕ್ಸಸ್ ಆಗಿದ್ದಾರೆ.

ರಾಜ್ಯಪಾಲರಿಗೆ ಬಿಗಿ ಭದ್ರತೆ..!

ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದ (West bengal) ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರನ್ನು ಸ್ಫೋಟ ಮಾಡುವುದಾಗಿ ಬೆದರಿಕೆ ಬಂದ ಹಿನ್ನೆಲೆ ಅವರ ನಿವಾಸ ಹಾಗೂ ಕಚೇರಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಕೋಲ್ಕತ್ತಾದ ಲೋಕಭವನದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು,ರಾಜ್ಯಪಾಲರ ಕಚೇರಿಯಿಂದಲೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.

ರಾಜ್ಯಪಾಲರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬೆದರಿಕೆಯ ಸಂದೇಶವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ನೀಡಲಾಗಿದೆ.

Z-ಪ್ಲಸ್ ವರ್ಗದ ಭದ್ರತೆಯಲ್ಲಿರುವ ರಾಜ್ಯಪಾಲರ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಬಂಗಾಳ ಪೊಲೀಸರು ಮತ್ತು CRPF ತಂಡ ಶ್ರಮವಹಿಸುತ್ತಿದೆ. ಅಧಿಕಾರಿಗಳು ಸಭೆ ಕೂಡ ನಡೆಸಿದ್ದು, ಅಗತ್ಯ ಭದ್ರತೆ ಬಗ್ಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : ಕ್ಷುಲಕ ಕಾರಣಕ್ಕೆ ಡೆಲಿವರಿ ಬಾಯ್ ಮೇಲೆ ಹಲ್ಲೆ – ಬೈಕ್ ಸವಾರರಿಗೆ ಬಿತ್ತು ಗೂಸಾ.! 

ಹೆಚ್ಚಿನ ಸುದ್ದಿ

Change Language »
error: Content is protected !!