Monday, January 20, 2025
Homeಕ್ರೀಡೆನಿಷೇಧಿತ ಸ್ಟಿರಾಯ್ಡ್‌ ಬಳಕೆ: ಭಾರತದ ವೇಟ್‌ ಲಿಫ್ಟರ್‌ ಸಂಜಿತಾಗೆ 4 ವರ್ಷ ನಿಷೇಧ

ನಿಷೇಧಿತ ಸ್ಟಿರಾಯ್ಡ್‌ ಬಳಕೆ: ಭಾರತದ ವೇಟ್‌ ಲಿಫ್ಟರ್‌ ಸಂಜಿತಾಗೆ 4 ವರ್ಷ ನಿಷೇಧ

ಎರಡು ಬಾರಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಆಗಿರುವ ಭಾರತದ ವೇಟ್‌ಲಿಫ್ಟರ್ ಸಂಜಿತಾ ಚಾನು ಅವರು ನಿಷೇಧಿತ ಡ್ರಗ್‌ ಸೇವನೆ ಮಾಡಿರುವುದು ಧೃಡಪಟ್ಟಿದ್ದು, ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ(ನಾಡಾ) ಶಿಸ್ತು ಸಮಿತಿಯು ಅವರಿಗೆ 4 ವರ್ಷಗಳ ನಿಷೇಧ ಹೇರಿದೆ.  

2022 ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ವೇಳೆ ಚಾನುವನ್ನು ಪರೀಕ್ಷಿಸಿದಾಗ ನಿಷೇಧಿತ ಉದ್ದೀಪನ ಮದ್ದು ಸೇವಿಸಿರುವುದು ಧೃಡವಾಗಿತ್ತು. ‌

 ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಬಳಸುವ ಡ್ರೊಸ್ಟಾನೊಲೋನ್‌ ಸ್ಟಿರಾಯ್ಡ್‌ ಅನ್ನು ಚಾನು ತೆಗೆದುಕೊಂಡಿರುವುದಾಗಿ ಧೃಡಪಟ್ಟಿದೆ. ಈ ಸ್ಟೀರಾಯ್ಡ್ ಅನ್ನು ಕ್ರೀಡಾಪಟುಗಳು ತಮ್ಮ ಕ್ಷಮತೆ ಹೆಚ್ಚಿಸಲು ಬಳಸಿಕೊಳ್ಳುತ್ತಾರೆ, ಇದನ್ನು ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ (ವಾಡಾ) ನಿಷೇಧಿತ ಡ್ರಗ್ಸ್‌ ಪಟ್ಟಿಯಲ್ಲಿ ಸೇರಿಸಿದೆ.

 ಚಾನು ಡೋಪಿಂಗ್ ಬಲೆಗೆ ಬಿದ್ದಿರುವುದು ಇದೇ ಮೊದಲಲ್ಲ. 2017 ರಲ್ಲಿ ಯುನೈಟೆಡ್ ಸ್ಟೇಟ್ಸ್ ಆಂಟಿ-ಡೋಪಿಂಗ್ ಏಜೆನ್ಸಿ (ಯುಎಸ್ಎಡಿಎ) ನಡೆಸಿದ ಪರೀಕ್ಷೆಯಲ್ಲಿ ಚಾನು ನಿಷೇಧಿತ ಸ್ಟಿರಾಯ್ಡ್‌ ತೆಗೆದುಕೊಂಡಿರುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು 2018 ರಲ್ಲಿ ಇಂಟರ್ನ್ಯಾಷನಲ್ ವೇಟ್‌ಲಿಫ್ಟಿಂಗ್ ಫೆಡರೇಶನ್ (ಐಡಬ್ಲ್ಯುಎಫ್) ನಿಷೇಧಿಸಿತ್ತು.

ಹೆಚ್ಚಿನ ಸುದ್ದಿ

error: Content is protected !!