Wednesday, August 19, 2026
Homeಟಾಪ್ ನ್ಯೂಸ್WEATHER UPDATE : ಮುಂದುವರೆಯಲಿದೆ ಮೈಕೊರೆಯುವ ಚಳಿ - ಅಲ್ಲಲ್ಲಿ ತುಂತುರು ಮಳೆ!

WEATHER UPDATE : ಮುಂದುವರೆಯಲಿದೆ ಮೈಕೊರೆಯುವ ಚಳಿ – ಅಲ್ಲಲ್ಲಿ ತುಂತುರು ಮಳೆ!

ಬೆಂಗಳೂರು : ರಾಜ್ಯದಲ್ಲಿ ಮೈ ಕೊರೆಯುವ ಚಳಿ (Winter ) ಮುಂದುವರಿದಿದ್ದು, ಮುಂದಿನ ಮೂರ್ನಾಲ್ಕು ದಿನದಲ್ಲಿ ಚಳಿ ಇನ್ನಷ್ಟು ವ್ಯಾಪಿಸಲಿದೆ ಎಂದು ಹವಾಮಾನ ಇಲಾಖೆ (Weather forecast ) ಹೇಳಿದೆ.

ವಿಪರೀತ ಚಳಿಗೆ ಜನರು ಗಢಗಢ ನಡುಗುತ್ತಿದ್ದು, ಥಂಡಿ ಗಾಳಿ ಹಾಗೂ ಅಲ್ಲಲ್ಲಿ ಸುರಿಯುತ್ತಿರುವ ತುಂತುರು ಮಳೆ ಜನರಿಗೆ ಮತ್ತಷ್ಟು ಸಂಕಷ್ಟತಂದೊಡ್ಡಿದೆ.

ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗದಲ್ಲಿ ಒಣಹವೆ ಇರಲಿದೆ ಎನ್ನಲಾಗಿದ್ದು, ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಇನ್ನು, ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಚಿಕ್ಕಬಳ್ಳಾಪುರದಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಜನವರಿ 28 ರ ಬಳಿಕ ಚಳಿ ಕೊಂಚ ಕಡಿಮೆಯಾಗಲಿದೆ. ಆದರೆ ಒಣಹವೆ ಮುಂದುವರಿಯಲಿದೆ ಎಂದು ವರದಿಯಾಗಿದ್ದು, ಅಲ್ಲಿಯವರೆಗೆ ವಯಸ್ಸಾದ ಜನರು ಹಾಗೂ ಮಕ್ಕಳು ಬೆಚ್ಚಗಿನ ಆಹಾರ ಸೇವಿಸಿ , ಮಫ್ಲರ್, ಟೋಪಿ, ಸ್ವೆಟ್ಟರ್ ಧರಿಸಿ ಅರೋಗ್ಯ ಕಾಪಾಡಿಕೊಳ್ಳುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ಇವರೇ ನೋಡಿ ಬಿಗ್ ಬಾಸ್-12 ಸೀಸನ್​​​​​​​ನ ವಿನ್ನರ್… 

ಹೆಚ್ಚಿನ ಸುದ್ದಿ

Change Language »
error: Content is protected !!