Friday, March 13, 2026
Homeಟಾಪ್ ನ್ಯೂಸ್PRADEEP ESHWAR: ಬಿಜೆಪಿಗರನ್ನು ಹುಡುಕಿ.. ಹುಡುಕಿ ಜೈಲಿಗೆ ತುಂಬ್ತೀವಿ- ಪ್ರದೀಪ್ ಈಶ್ವರ್ ಎಚ್ಚರಿಕೆ

PRADEEP ESHWAR: ಬಿಜೆಪಿಗರನ್ನು ಹುಡುಕಿ.. ಹುಡುಕಿ ಜೈಲಿಗೆ ತುಂಬ್ತೀವಿ- ಪ್ರದೀಪ್ ಈಶ್ವರ್ ಎಚ್ಚರಿಕೆ

ಬೆಂಗಳೂರು : ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿರುವ ಬಗ್ಗೆ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.ಈ ಬಗ್ಗೆ ಮಾತನಾಡಿದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕ ಸುಬ್ಬಾರೆಡ್ಡಿ ಅವರು ಬಡತನದಿಂದ ಮೇಲೆ ಬಂದವರು.ಸತತ ಮೂರು ಬಾರಿ ಶಾಸಕರಾಗಿ ಜನರ ಸೇವೆ ಮಾಡುತ್ತಿದ್ದಾರೆ.ಆದ್ರೆ ಕೇಂದ್ರ ಸರ್ಕಾರ ಇಡಿ ದುರುಪಯೋಗ ಪಡಿಸಿಕೊಂಡು ಕೇವಲ ಕಾಂಗ್ರೆಸ್ ನಾಯಕರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದೆ.ಅಮಿತ್ ಶಾ ಪುತ್ರ ಜಯ್ ಶಾ ವ್ಯವಹಾರ ಕ್ಲೀನ್ ಆಗಿದ್ಯಾ.? ಅದಾನಿ,ಅಂಬಾನಿ ಮೇಲೆ ಯಾಕೆ ರೇಡ್ ಆಗಲ್ಲ ಎಂದು ಪ್ರಶ್ನಿಸಿದ್ದಾರೆ.

ಇನ್ನು ಇದೇ ವೇಳೆ,ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣದ ವಿರುದ್ಧ ಕಿಡಿಕಾರಿದ ಪ್ರದೀಪ್ ಈಶ್ವರ್,2029 ಕ್ಕೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು,ಆಗ ಬಿಜೆಪಿ ನಾಯಕರನ್ನು ಹುಡುಕಿ ಹುಡುಕಿ ತಿಹಾರ್ ಜೈಲಿಗೆ ತುಂಬಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಕಾಂಗ್ರೆಸ್ ನಾಯಕರ ವಿರುದ್ಧ ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಅವರು ಫ್ಲವರ್ ಹಾಕಿದ್ರೆ ನಾವು ಪಾಟ್ ಸೇರಿಸಿ ಹಾಕುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!