ಪಂಚರತ್ನ ಯೋಜನೆ ವಿದೇಶಕ್ಕೆ ಹೋಗಿ ಕಲಿತು ಬಂದಿಲ್ಲ, ಅರ್ಥಿಕ ತಜ್ಞರು ಹೇಳಿಕೊಟ್ಟ ಯೋಜನೆ ಅಲ್ಲ, ಜನರ ಸಂಕಷ್ಟ ನೋಡಿ ಪಂಚರತ್ನ ಯೋಜನೆ ರೂಪಿಸಿದ್ದೇನೆ ಎಂದು ಪಂಚರತ್ನ ಸಮಾರೋಪದಲ್ಲಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಕಾಂಗ್ರೆಸ್ ನವರ ಯಾವುದೇ ಗ್ಯಾರಂಟಿ ಕಾರ್ಡ್ ನಂಬಬೇಡಿ, ಎಲ್ಲಾ ಡ್ಯೂಪ್ಲಿಕೆಟ್ ಕಾರ್ಡ್ ಗಳು, ಆ ಭಾಗ್ಯ ಕೊಟ್ಟೆ, ಈ ಭಾಗ್ಯ ಕೊಟ್ಟೆ ಅಂತಾರೆ, ಆದರೆ ಯಾರಿಗೂ ಹಣ ತಲುಪಿಲ್ಲ
ನಿಮ್ಮ ಆಶೀರ್ವಾದ ಮಾಡಿ, ದೇವೇಗೌಡರು ಕಟ್ಟಿದ ಪಕ್ಷ ಬೆಂಬಲಿಸಿ. ರಾಜ್ಯದ ಜನರು 123 ಸ್ಥಾನ ಕೊಟ್ಟರೆ ಸುವರ್ಣ ಯುಗ ತರಬಹುದು ಎಂದು ಹೆಚ್ ಡಿಕೆ ಹೇಳಿದ್ದಾರೆ.
ಬಿಜೆಪಿ ದಂಡು ಬರುತ್ತಿದೆ. ಆ ದಂಡಿಗೆ ಬೆರಗಾಗಬೇಡಿ. ನರೇಂದ್ರ ಮೋದಿ ಇಂತಹ ಕಾರ್ಯಕ್ರಮ ಮಾಡಲು ಹತ್ತು ಬಾರಿ ಬರಬೇಕು. ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕ್ರಮದಲ್ಲಿ ಕೆಲವೇ ಸಮಯದಲ್ಲಿ ಚೇರ್ ಗಳು ಖಾಲಿಯಾಗುತ್ತದೆ. ಆದರೆ ಬೆಳಿಗ್ಗೆಯಿಂದ ಈಗ ರಾತ್ರಿ ತನಕ ಇಷ್ಟು ಜನರು ಸೇರಿದ್ದೀರಾ, ಇದು ಜೆಡಿಎಸ್ ಪಕ್ಷದ ದೊಡ್ಡ ಶಕ್ತಿ.ನಮ್ಮ ಹತ್ತಿರ ಹಣ ಇಲ್ಲ, ಕುಕ್ಕರ್ ಕೊಡಲು ಶಕ್ತಿ ಇಲ್ಲ. ಇದಕ್ಕೆ ಬೆರಗಾಗಬೇಡಿ, ಶಾಶ್ವತ ಕಾರ್ಯಕ್ರಮ ರೂಪಿಸುತ್ತೇನೆ. ನಮ್ಮ ಮೇಲೆ ನಂಬಿಕೆ ಇಟ್ಟು ಜೆಡಿಎಸ್ ಬೆಂಬಲಿಸಿ ಎಂದು ಹೆಚ್ಡಿಕೆ ಮನವಿ ಮಾಡಿದ್ರು.