Wednesday, February 19, 2025
Homeಟಾಪ್ ನ್ಯೂಸ್ವಾಷಿಂಗ್ ಮಷಿನ್ ಸ್ಫೋಟ, ವ್ಯಕ್ತಿ ಕ್ಷಣಾರ್ಧದಲ್ಲಿ ಪಾರು: ವೈರಲ್

ವಾಷಿಂಗ್ ಮಷಿನ್ ಸ್ಫೋಟ, ವ್ಯಕ್ತಿ ಕ್ಷಣಾರ್ಧದಲ್ಲಿ ಪಾರು: ವೈರಲ್

ಮನೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಸ್ಫೋಟಗೊಂಡು ಅವಾಂತರಗಳು ಸೃಷ್ಟಿಯಾಗುವುದು ಹೊಸದೇನೂ ಅಲ್ಲ. ಇಂತಹ ದೃಶ್ಯಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ಅಂತಹದ್ದೇ ಘಟನೆ ನಡೆದಿದ್ದು, ಈ ದೃಶ್ಯವನ್ನು ಕಂಡಾಗ ಒಂದು ಕ್ಷಣ ಎದೆ ನಡುಗಿ ಹೋಗುತ್ತದೆ.

ಇದು ವಾಷಿಂಗ್ ಮಷಿನ್ ಸ್ಫೋಟಗೊಳ್ಳುವ ದೃಶ್ಯ. ಜತೆಗೆ, ಈ ಘಟನೆಯಲ್ಲಿ ವ್ಯಕ್ತಿಯೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಟ್ವಿಟ್ಟರ್ ಖಾತೆಯೊಂದರಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಾಷಿಂಗ್ ಮಷಿನ್ ಕಾರ್ಯನಿರ್ವಹಿಸುತ್ತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಆಗ ಅದೇ ಕೋಣೆಯೊಳಗಿನಿಂದ ಒಬ್ಬರು ವ್ಯಕ್ತಿ ವಾಷಿಂಗ್ ಮಷಿನ್ ಪಕ್ಕದಿಂದಲೇ ಹೊರಗೆ ಹೋಗುತ್ತಾರೆ. ಇದಾದ ಕೆಲವೇ ಸೆಕೆಂಡುಗಳಲ್ಲಿ ವಾಷಿಂಗ್ ಮಷಿನ್ ಸ್ಫೋಟಗೊಂಡು ಸುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿ ನಾಶಮಾಡುತ್ತದೆ.

ಈ ವಿಡಿಯೋ ಈಗ ಎಲ್ಲರನ್ನೂ ಬೆಚ್ಚಿಬೀಳುವಂತೆ ಮಾಡಿದೆ. ಆದರೆ ಈ ಘಟನೆ ಎಲ್ಲಿ ನಡೆದಿರುವುದು ಎಂಬ ಮಾಹಿತಿ ಲಭ್ಯವಾಗಿಲ್ಲ. ಬೇರೆ ಬೇರೆ ಸೋಶಿಯಲ್ ಮೀಡಿಯಾ ಖಾತೆಗಳಲ್ಲೂ ಹರಿದಾಡುತ್ತಿದೆ. ಜತೆಗೆ, ಈ ವಿಡಿಯೋ ಸಾಕಷ್ಟು ವೀಕ್ಷಣೆಯನ್ನೂ ಗಳಿಸಿದೆ. ಈ ದೃಶ್ಯ ಕಂಡ ನೆಟ್ಟಿಗರು ಅಚ್ಚರಿ, ಆಘಾತ ವ್ಯಕ್ತಪಡಿಸಿದ್ದಾರೆ. ಜತೆಗೆ, ಈ ವ್ಯಕ್ತಿ ಅಪಾಯದಿಂದ ಪಾರಾಗಿದ್ದಕ್ಕೆ ಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!