ಬಿಜೆಪಿಯ ಮುಖಂಡ ಅಮಿತ್ ಮಾಳವಿಯಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ವಕ್ಫ್ ಆಸ್ತಿ ಕುರಿತು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ನೀಡಿದ ಹೇಳಿಕೆಯನ್ನು ಟೀಕಿಸಿದ್ದಾರೆ. ಈ ವೀಡಿಯೊದಲ್ಲಿ ಸಂಸದ ಕಲ್ಯಾಣ್, ಮುಸ್ಲಿಮರು ಎಲ್ಲಿ ಕುಳಿತು ನಮಾಜ್ ಓದುತ್ತೀರೋ ಅದನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.
ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿಯ ಈ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿರುವ ಅಮಿತ್ ಮಾಳವಿಯಾ,ರಸ್ತೆಗಳು,ರೈಲ್ವೆ ಹಳಿಗಳು, ವಿಮಾನ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳನ್ನು ನಮಾಜ್‌ಗಾಗಿ ಮುಸಲ್ಮಾನರು ಬಳಸುತ್ತಾರೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಹೀಗೆ ಬಳಕೆ ಮಾಡುವ ಕಾರಣಕ್ಕೆ ಇನ್ಮುಂದೆ ಈ ರೀತಿಯ ಸಾರ್ವಜನಿಕ ಸ್ಥಳಗಳನ್ನೂ ವಕ್ಫ್ ಆಸ್ತಿ ಎಂದು ಹೇಳುವ ದಿನಗಳು ಬರಬಹುದು ಎಂದು ಸಂಸದ ಕಲ್ಯಾಣ ಬ್ಯಾನರ್ಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.