Thursday, July 16, 2026
Homeಟಾಪ್ ನ್ಯೂಸ್BREAKFAST RECIPE: ವೇಗವಾಗಿ ತೂಕ ಇಳಿಸಬೇಕೇ?- ಬೆಳಗಿನ ತಿಂಡಿಗೆ ಹೀಗೆ ಮಾಡಿ ತಡ್ಕಾ ಸ್ಪ್ರೌಟ್ಸ್

BREAKFAST RECIPE: ವೇಗವಾಗಿ ತೂಕ ಇಳಿಸಬೇಕೇ?- ಬೆಳಗಿನ ತಿಂಡಿಗೆ ಹೀಗೆ ಮಾಡಿ ತಡ್ಕಾ ಸ್ಪ್ರೌಟ್ಸ್

ಬೆಳಗಿನ ಉಪಾಹಾರಕ್ಕೆ (Breakfast Recipe) ಆರೋಗ್ಯಕರ ಮತ್ತು ಸುಲಭವಾಗಿ ಮಾಡಬಹುದಾದ ಅಡುಗೆಯನ್ನು ಹುಡುಕುತ್ತಿದ್ದರೆ, ತಡ್ಕಾ ಸ್ಪ್ರೌಟ್ಸ್‌ ಅಥವಾ ಮೊಳಕೆಕಾಳುಗಳು (Tadka Sprouts) ಅತ್ಯುತ್ತಮ ಆಯ್ಕೆ. ಕಡಿಮೆ ಸಮಯದಲ್ಲಿ ತಯಾರಾಗುವ ಈ ಉಪಹಾರ ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ನೀಡುತ್ತದೆ.

ಬೇಕಾಗುವ ಪದಾರ್ಥಗಳು:
* ಮೊಳಕೆ ಬರಿಸಿದ ಹೆಸರುಕಾಳು – 1 ಸಣ್ಣ ಬೌಲ್
* ಎಣ್ಣೆ – 2 ಟೇಬಲ್ ಚಮಚ
* ಸಣ್ಣಗೆ ಹೆಚ್ಚಿದ ಈರುಳ್ಳಿ- 2
* ಸಣ್ಣಗೆ ಹೆಚ್ಚಿದ ಟೊಮೆಟೊ – 2
* ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
* ಜೀರಿಗೆ – 1/4 ಟೀಚಮಚ
* ಅರಿಶಿನ ಪುಡಿ – 1/2 ಟೀಚಮಚ
* ಉಪ್ಪು – ರುಚಿಗೆ ತಕ್ಕಷ್ಟು
* ನೀರು – 1 ಟೇಬಲ್ ಚಮಚ

ಮಾಡುವ ವಿಧಾನ:
* ಮೊದಲು ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಬಿಸಿ ಮಾಡಿ. ಎಣ್ಣೆ ಕಾದ ನಂತರ ಜೀರಿಗೆ ಹಾಕಿ ಸಿಡಿಯಲು ಬಿಡಿ.
* ನಂತರ ಹೆಚ್ಚಿದ ಹಸಿರು ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಿರಿ. ನಂತರ ಟೊಮೆಟೊ ಚೂರುಗಳನ್ನು ಸೇರಿಸಿ, ಅವು ಮೆತ್ತಗಾಗುವವರೆಗೆ ಬಾಡಿಸಿ.
* ಈ ಮಿಶ್ರಣಕ್ಕೆ ಅರಿಶಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕೈಯಾಡಿಸಿ.
* ಈಗ ಮೊಳಕೆ ಬರಿಸಿದ ಕಾಳುಗಳನ್ನು ಬಾಣಲೆಗೆ ಹಾಕಿ ಮಿಶ್ರಣ ಮಾಡಿ. ಕಾಳುಗಳು ಸರಿಯಾಗಿ ಬೇಯಲು ಒಂದು ಚಮಚ ನೀರನ್ನು ಚಿಮುಕಿಸಿ, ತಟ್ಟೆ ಮುಚ್ಚಿ 10 ರಿಂದ 15 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಲು ಬಿಡಿ.
* ಈಗ ರುಚಿಕರವಾದ ಹಾಗೂ ಬಿಸಿಬಿಸಿಯಾದ ತಡ್ಕಾ ಮೊಳಕೆಕಾಳುಗಳ ಉಪಾಹಾರ ಸವಿಯಲು ಸಿದ್ಧ. ಈ ತಿಂಡಿಯು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಮತ್ತು ಡಯಟ್ ಮಾಡುವವರಿಗೆ ತುಂಬಾ ಒಳ್ಳೆಯದು.

ಇದನ್ನೂ ಓದಿ : ಎಣ್ಣೆಯಿಲ್ಲದೆ ಸುಲಭವಾಗಿ ತಯಾರಿಸಿ ಆರೋಗ್ಯಕರ ಓಟ್ಸ್ ಸ್ಟೀಮ್ಡ್ ವಡೆ

ಹೆಚ್ಚಿನ ಸುದ್ದಿ

Change Language »
error: Content is protected !!