ಬಾಬಾ ರಾಮ್ ದೇವ್.. ಒಂದಿಲ್ಲೊಂದು ವಿಚಾರಕ್ಕೆ ಆಗ್ಗಾಗ್ಗೆ ಸದ್ದು ಸುದ್ದಿಯಲ್ಲಿರ್ತಾರೆ. ಯೋಗ ಮತ್ತು ಆಯುರ್ವೇದದ ಮಹತ್ವದ ಬಗ್ಗೆ ಬಾಬಾ ರಾಮ್ ದೇವ್ ಹೆಚ್ಚೆಚ್ಚು ಜನರನ್ನು ಸೆಳೆಯುತ್ತಾರೆ ಮತ್ತು ತಮ್ಮದೇ ಆಯುರ್ವೇದಿಕ್ ಬ್ರಾಂಡ್ ಆದ ಪಂತಂಜಲಿ ಉತ್ಪನ್ನಗಳನ್ನು ಹೊಂದಿದ್ದಾರೆ.
घोड़े की तरह तेज़ दौड़ने की ताक़त, Strong Immunity, Anti-aging और Power चाहिए तो Swarn Shilajit व Immunogrit Gold खाइए#immunity #antiaging #shilajit pic.twitter.com/VGzLrFt776
— स्वामी रामदेव (@yogrishiramdev) February 18, 2025
ಹೊಸದೊಂದು ಪ್ರಾಡಕ್ಟ್ ಪ್ರಮೋಟ್ ಮಾಡಲು ಬಾಬಾ ರಾಮ್ ದೇವ್ ವಿಡಿಯೋ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಕುದುರೆಯಂತೆ ವೇಗವಾಗಿ ಓಡುವ ಶಕ್ತಿ, ಬಲವಾದ ರೋಗನಿರೋಧಕ ಶಕ್ತಿ, ವಯಸ್ಸಾಗುವುದನ್ನು ತಡೆಯುವ ಶಕ್ತಿ ಬೇಕಾದಲ್ಲಿ ಸ್ವರ್ಣ ಶಿಲಾಜಿತ್ ಮತ್ತು ಇಮ್ಯುನೊಗ್ರಿಟ್ ಗೋಲ್ಡ್ ತಿನ್ನಿರಿ ಎಂದು ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಬಾಬಾ ರಾಮ್ ದೇವ್ ಸ್ವತಃ ತಾವೇ ಕುದುರೆ ಜೊತೆಗೆ ರನ್ನಿಂಗ್ ರೇಸ್ ಓಡಿ ತಮ್ಮ ಪತಂಜಲಿ ಪ್ರಾಡಕ್ಟ್ ಅನ್ನು ಪ್ರಮೋಟ್ ಮಾಡಿದ್ದಾರೆ. ಈ ಹಿಂದೆ ಕರೋನಾ ಸಂದರ್ಭದಲ್ಲಿ ಪತಂಜಲಿ ಕಿಟ್ ಬಳಸಿದ್ರೆ ಕೋವಿಡ್ ನಿಂದ ರಕ್ಷಣೆ ಪಡೆಯಬಹುದು ಎಂಬ ಜಾಹೀರಾತು ನೀಡಿ ಅವತು ಸಂಕಷ್ಟಕ್ಕೆ ಸಿಲುಕಿದ್ದರು.