Tuesday, November 5, 2024
Homeಚುನಾವಣೆ 2023ಬಿಜೆಪಿ ಮುಖಂಡನ ಕಚೇರಿಯಲ್ಲಿ ವೋಟರ್ ಐಡಿ ಪ್ರಿಂಟರ್ ಪತ್ತೆ!

ಬಿಜೆಪಿ ಮುಖಂಡನ ಕಚೇರಿಯಲ್ಲಿ ವೋಟರ್ ಐಡಿ ಪ್ರಿಂಟರ್ ಪತ್ತೆ!

ಬಿಜೆಪಿ ಮುಖಂಡನ ಕಚೇರಿಯ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿ ವೋಟರ್ ಐಡಿ ಪ್ರಿಂಟರ್, ಎರಡು ವೋಟರ್ ಐಡಿ, ಮೂರು ಕಂಪ್ಯೂಟರ್ ಹಾಗೂ 2500 ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ. ಯಲಹಂಕದ ಅಗ್ರಹಾರ ಬಡಾವಣೆಯಲ್ಲಿರುವ ಮುನಿರಾಜು ಎಂಬುವವರ ಕಚೇರಿಯ ಮೇಲೆ ದಾಳಿ ನಡೆಸಲಾಗಿದ್ದು, ಈತ ಬ್ಯಾಟರಾಯನಪುರ ಬಿಜೆಪಿ ಮುಖಂಡ ಮುನೇಂದ್ರ ಕುಮಾರ್ ಆಪ್ತ ಎನ್ನಲಾಗಿದೆ.
ಮುನಿರಾಜು ಒಡೆತನಕ್ಕೆ ಸೇರಿದ ಎಸ್‍ಎಲ್‍ವಿ ಎಂಟರ್‍ಪ್ರೈಸಸ್ ಎಂಬ ಕಚೇರಿ ಸ್ಥಳದಲ್ಲಿ ಚುನಾವಣಾ ಅಕ್ರಮ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯನ್ನಾಧರಿಸಿ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದರು. ಕೆಲದಿನಗಳ ಹಿಂದಷ್ಟೇ ಜಿಎಸ್‍ಟಿ ಅಧಿಕಾರಿಗಳೂ ಸಹ ಮುನಿರಾಜು ಮನೆಯ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಮುನೇಂದ್ರ ಕುಮಾರ್ ಭಾವಚಿತ್ರವಿರುವ ಪಾತ್ರೆ ಕುಕ್ಕರ್‍ಗಳು ಪತ್ತೆಯಾಗಿತ್ತು.

ಹೆಚ್ಚಿನ ಸುದ್ದಿ

error: Content is protected !!